ಯಲಹಂಕ: `ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಕೇಂದ್ರ ಮೀಸಲು ಆರಕ್ಷಕ ಪಡೆಯ ತರಬೇತಿ ಸಂಸ್ಥೆಗಳನ್ನು ತೆರೆಯಲಾಗುವುದು. ಅಲ್ಲಿ ಮಹಿಳಾ ಮತ್ತು ಪುರುಷ ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗುವುದು' ಎಂದು ಕರ್ನಾಟಕ ಮತ್ತು ಕೇರಳ ವಲಯ ಕೇಂದ್ರ ಮೀಸಲು ಆರಕ್ಷಕ ಪಡೆಯ ಮಹಾನಿರೀಕ್ಷಕ ಕೆ.ಅರ್ಕೇಶ್ ತಿಳಿಸಿದರು.

ಇಲ್ಲಿನ ಕೇಂದ್ರ ಮೀಸಲು ಆರಕ್ಷಕ ಪಡೆ ಕೇಂದ್ರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಮೈಸೂರಿನಲ್ಲಿ 1,000 ಮಹಿಳಾ ಬೆಟಾಲಿಯನ್, ಶಿವಮೊಗ್ಗದಲ್ಲಿ ಮಹಿಳಾ ಹಾಗೂ ಪುರುಷ ಬೆಟಾಲಿಯನ್ಗೆ ಸಾಮೂಹಿಕ ತರಬೇತಿ ಕೇಂದ್ರ ತೆರೆಯಲಾಗುವುದು.
ಯಲಹಂಕ ಕೇಂದ್ರದಲ್ಲಿನ ಹೆಚ್ಚುವರಿ ಸಿಬ್ಬಂದಿಯನ್ನು ಈ ಎರಡೂ ಕೇಂದ್ರಗಳಿಗೆ ಕಳುಹಿಸಲಾಗುವುದು' ಎಂದರು.

`ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಜಂಗಲ್ ಕ್ರಾಫ್ಟ್ ಆರಂಭಿಸಿ, ಇಲ್ಲಿ ತರಬೇತಿ ಪಡೆದವನ್ನು ನಕ್ಸಲ್ಪೀಡಿತ ಪ್ರದೇಶ, ಭಯೋತ್ಪಾದನೆ, ಪ್ರಕೃತಿ ವಿಕೋಪದಂತಹ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಬಳಸಿಕೊಳ್ಳಲಾಗುವುದು. ಅಲ್ಲದೆ ಅವರಿಗೆ ಗೆರಿಲ್ಲಾ ಮಾದರಿಯ ತರಬೇತಿಯನ್ನು ನೀಡಲಾಗುವುದು' ಎಂದು ತಿಳಿಸಿದರು.

ನಿವೃತ್ತಿ: ಅವರು ಸೇವೆಯಿಂದ ಶುಕ್ರವಾರ ನಿವೃತ್ತಿಯಾದರು. `ತಾನು ಮುಂದೆ ಸ್ವಯಂಸೇವಾ ಸಂಸ್ಥೆ ಸ್ಥಾಪನೆ ಮಾಡಿ, ನಗರ ಮತ್ತು ಗ್ರಾಮೀಣ ಪ್ರದೇಶಗಳ ಯುವಕರ ಅಂತರ ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ' ಎಂದರು.

`ಗ್ರಾಮೀಣ ಭಾಗದ ಯುವಕರು ಇಂಗ್ಲಿಷ್ ಭಾಷೆ, ಕಂಪ್ಯೂಟರ್ ಶಿಕ್ಷಣ, ಚಾಲನಾ ಕೌಶಲದಲ್ಲಿ ಹಿಂದುಳಿದಿದ್ದಾರೆ. ತಾನು ಸ್ಥಾಪಿಸಲಿರುವ ಅಕಾಡೆಮಿ ಮೂಲಕ ಗ್ರಾಮೀಣ ಯುವಕರ ಕೌಶಲವನ್ನು ಬಲಪಡಿಸಲು ಪ್ರಯತ್ನಿಸುತ್ತೇನೆ' ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.