ಶನಿವಾರ, ಜನವರಿ 18, 2020
23 °C

ಆರು ತಿಂಗಳಿಂದಲೇ ಸಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ಮನೆಗೆಲಸದ ಸಹಾಯಕಿ ಸಂಗೀತಾ ರಿಚರ್ಡ್‌, ದೆಹಲಿಯಲ್ಲಿರುವ ತಮ್ಮ ಕುಟುಂಬ­ದವರನ್ನು ನ್ಯೂಯಾರ್ಕ್‌ಗೆ ಕರೆಸಿಕೊಳ್ಳುವುದಕ್ಕಾಗಿ ಕಳೆದ ಆರು ತಿಂಗಳಿನಿಂದ ಸಂಚು ರೂಪಿಸಿದ್ದರು. ನ್ಯೂಯಾರ್ಕ್‌ ಮ್ಯಾನ್‌ಹಟನ್‌ನ  ಅಟಾರ್ನಿ ಪ್ರೀತ್‌ ಬರಾರ,  ಅಮೆರಿಕದ ವಿದೇಶಾಂಗ ಹಾಗೂ ಕಾನೂನು ಇಲಾಖೆ­ಗಳು ಮತ್ತು ನವದೆಹಲಿಯಲ್ಲಿರುವ ಅಮೆ­ರಿಕದ ರಾಯಭಾರ ಕಚೇರಿ ಅಧಿಕಾರಿಗಳು ಸಂಗೀತಾ ಅವರಿಗೆ ಈ ವಿಷಯವಾಗಿ ನೆರವು ನೀಡಿದ್ದರು.ಸಂಗೀತಾ ಪತಿ ಫಿಲಿಪ್‌ ರಿಚರ್ಡ್‌ ಹಾಗೂ ಇಬ್ಬರು ಮಕ್ಕಳು ಡಿಸೆಂಬರ್‌ 10ರಂದು ನ್ಯೂಯಾರ್ಕ್‌ಗೆ ತೆರಳಲು ಅಮೆರಿಕ ಸರ್ಕಾರ ನೆರವು ನೀಡಿತ್ತು ಎನ್ನು­ವುದನ್ನು ಬರಾರ  ಒಪ್ಪಿಕೊಂಡಿದ್ದಾರೆ. ‘ಸಂಗೀತಾ ಹಾಗೂ ಕುಟುಂಬದವರ ವಿರುದ್ಧ ಭಾರತದಲ್ಲಿ ಪ್ರಕರಣ ದಾಖಲಾ­ಗಿದೆ. ಹೀಗಿರುವಾಗ ಅಮೆರಿಕ ಸರ್ಕಾರಕ್ಕೆ ಇವರನ್ನೆಲ್ಲ ತನ್ನ ದೇಶಕ್ಕೆ ಕರೆಸಿಕೊಳ್ಳು­ವು­ದಕ್ಕೆ ಏನು ಹಕ್ಕಿದೆ’ ಎಂದು ಪ್ರಶ್ನಿಸುತ್ತಾರೆ ವಿದೇಶಾಂಗ ಸಚಿವಾಲ­ಯದ ವಕ್ತಾರ ಸೈಯದ್‌ ಅಕ್ಬರುದ್ದೀನ್‌.ವಲಸೆ ವಿಷಯಗಳಲ್ಲಿ ಪರಿಣತಿ ಹೊಂದಿ­­­ರುವ ಕಾನೂನು ಸಂಸ್ಥೆ–ಆ್ಯೆಕ್ಸೆಸ್‌ ಇಮಿಗ್ರೇಷನ್‌ ಕಚೇರಿಯಲ್ಲಿ ಜು.8ರಂದು ದೇವಯಾನಿ, ಸಂಗೀತಾರನ್ನು ಭೇಟಿ­ಯಾಗಿದ್ದರು.  10 ಸಾವಿರ ಡಾಲರ್‌ ಪರಿ­ಹಾರ, ಅಮೆರಿಕದಲ್ಲಿಯೇ ಉಳಿ­ಯುವ ಸಲುವಾಗಿ ಸಾಮಾನ್ಯ ಪಾಸ್‌­ಪೋರ್ಟ್‌ ನೀಡಬೇಕು ಹಾಗೂ ವಲಸೆ ನಿಯಮದಲ್ಲಿ ವಿನಾಯ್ತಿ ನಿಡಬೇಕೆಂದು ಸಂಗೀತಾ ಬೇಡಿಕೆ ಮುಂದಿಟ್ಟಿದ್ದರು.

ಆದರೆ ಈ ಬೇಡಿಕೆ­ಯನ್ನು ತಿರಸ್ಕರಿಸಿ, ಭಾರತಕ್ಕೆ ಮರಳುವಂತೆ ತಾಕೀತು ಮಾಡಲಾಯಿತು. ಅದೇ ದಿನ ಸಂಗೀತಾ  ಪಾಸ್‌ಪೋರ್ಟ್‌ ರದ್ದಾಯಿತು. ಹಾಗಾಗಿ ಆಕೆ ಅಮೆರಿಕದಲ್ಲಿ ನೆಲೆಸಿರುವುದು ಅಕ್ರಮ ಎಂದಾಯಿತು. ನಂತರದಲ್ಲಿ ಅಟಾರ್ನಿ ಬರಾರ ಅವ­ರನ್ನು ಸಂಪ­ರ್ಕಿಸಿತು. ದೇವಯಾನಿ ಅವರು ಸಂಗೀತಾಗೆ ಕಿರುಕುಳ ನೀಡಿದ್ದಾರೆ ಎನ್ನಲಾದ ದೂರಿನ ತನಿಖೆಗೆ ವಿದೇಶಾಂಗ ಇಲಾಖೆಯ ರಾಜ­ತಾಂತ್ರಿಕ ರಕ್ಷಣಾ ವಿಭಾಗದ ನೆರವು ಪಡೆ­ದು­ಕೊಂಡಿತು. ಸಂಗೀತಾ ಮತ್ತು ಅವರ ಕುಟುಂಬ ‘ಟಿ’ವೀಸಾ ಪಡೆಯುವುದಕ್ಕೂ ಈ ಸಂಸ್ಥೆ ನೆರವು ನೀಡಿತು.

ಪ್ರತಿಕ್ರಿಯಿಸಿ (+)