ಬುಧವಾರ, ಜನವರಿ 29, 2020
23 °C

ಆರ್ಥಿಕ ಅಡಚಣೆ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, ಡಿ. 10 – ಇನ್ನು ಹತ್ತು ವರ್ಷಗಳಲ್ಲಿ ದೇಶವು ಆರ್ಥಿಕ ಕ್ಷೇತ್ರದಲ್ಲಿನ ಅಡಚಣೆಗಳನ್ನು ದಾಟಿ ಮುನ್ನಡೆಯುವುದೆಂಬ ಆಶಾಭಾವನೆಯನ್ನು ಕೇಂದ್ರ ಅರ್ಥಮಂತ್ರಿ ಶ್ರೀ ಟಿ. ಟಿ. ಕೃಷ್ಣಮಾಚಾರಿಯವರು ಇಂದು ಲೋಕ ಸಭೆಯಲ್ಲಿ ವ್ಯಕ್ತಪಡಿಸಿದರು.

ತೃತೀಯ ಯೋಜನೆಯ ಮಧ್ಯಕಾಲೀನ ಸಮೀಕ್ಷೆಯ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿದ ಸಚಿವರು, ‘ನಾಲ್ಕನೆಯ ಪಂಚವಾರ್ಷಿಕ ಯೋಜನೆಯ ಅಂತ್ಯದ ವೇಳೆಗೆ ದೀನರು, ದುರ್ಬಲರು ಹಸಿವಿನಿಂದ ತೊಳಲದಂತೆ, ಯಾರೂ ಅವಿದ್ಯಾವಂತರಾಗುಳಿಯದಂತೆ ಮಾಡುವುದು ಸಾಧ್ಯ’ ವೆಂದು ಘೋಷಿಸಿದರು.

ಪ್ರತಿಕ್ರಿಯಿಸಿ (+)