ಕೋಲ್ಕತ್ತ (ಐಎಎನ್ಎಸ್):  ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಲ್ಪಾವಧಿ ಬಡ್ಡಿ ದರಗಳನ್ನು ಪದೇ ಪದೇ ಹೆಚ್ಚಿಸುತ್ತಿರುವ ಬಗ್ಗೆ ಆರ್ಥಿಕ ತಜ್ಞರ ಮಧ್ಯೆ ಭಿನ್ನಾಭಿಪ್ರಾಯಗಳಿವೆ.
ಕಳೆದ 20 ತಿಂಗಳಲ್ಲಿ 12 ಬಾರಿ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸುವ ಮೂಲಕ ಆಕ್ರಮಣಕಾರಿ ಧೋರಣೆ ತಳೆದಿರುವ `ಆರ್ಬಿಐ~ನ ನಿಲುವನ್ನೇ ಕೆಲವರು ಪ್ರಶ್ನಿಸ್ದ್ದಿದರೆ, ಇನ್ನೂ ಕೆಲವರು ಈ ಕ್ರಮಗಳು ಆರ್ಥಿಕ ವೃದ್ಧಿಗೆ ಅಡ್ಡಿಯಾಗಲಿವೆ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ. ದೀರ್ಘಾವಧಿಯಲ್ಲಿ ಹಣದುಬ್ಬರ ಮತ್ತು ಆರ್ಥಿಕ ವೃದ್ಧಿ ಮಧ್ಯೆ ಯಾವುದೇ ಸಂಬಂಧ ಇಲ್ಲ ಎಂದು ವಾದಿಸಿರುವ ಕೆಲ ಪರಿಣತರು ದರ ಏರಿಕೆ ಧೋರಣೆ ಬೆಂಬಲಿಸಿದ್ದಾರೆ.

ಕೇಂದ್ರೀಯ ಬ್ಯಾಂಕ್ನ ಹಣಕಾಸು ನೀತಿಯು ತನ್ನ ಉದ್ದೇಶಿತ ಪರಿಣಾಮ ಬೀರುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದು ಹಣದುಬ್ಬರವನ್ನೂ ನಿಯಂತ್ರಿಸುತ್ತಿಲ್ಲ. ಇನ್ನೊಂದೆಡೆ ಆರ್ಥಿಕ ವೃದ್ಧಿಯನ್ನೂ ಉತ್ತೇಜಿಸುತ್ತಿಲ್ಲ. ರೆಪೊ ದರ ಹೆಚ್ಚಳದಿಂದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದೆ. ತಯಾರಿಕೆ ಮತ್ತು ಸೇವಾ ವಲಯದ ವೃದ್ಧಿಗೆ ತೀವ್ರ ಅಡ್ಡಿಯಾಗಿದೆ. ಆದರೆ, ಈ ವಲಯಗಳು ಕಳೆದ ಒಂದು ವರ್ಷದಲ್ಲಿ ಹಣದುಬ್ಬರಕ್ಕೆ ಯಾವುದೇ ಕೊಡುಗೆಯನ್ನೇ ನೀಡಿಲ್ಲ. ಗರಿಷ್ಠ ಮಟ್ಟದ ಬಡ್ಡಿ ದರಗಳು ಆರ್ಥಿಕ ವೃದ್ಧಿಗೆ ಅಡ್ಡಿಯಾಗಲಿದೆ ಎನ್ನುವ ಅಭಿಪ್ರಾಯವನ್ನು ಭಾರತೀಯ ಅಂಕಿ ಸಂಖ್ಯೆ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ದೀಪಾಂಕರ ದಾಸ್ಗುಪ್ತಾ ಅವರೂ ಅನುಮೋದಿಸುತ್ತಾರೆ.

`ಕಾಯಿಲೆ ಗುಣಪಡಿಸಲು ಆರ್ಬಿಐ ಬಹುಶಃ ತಪ್ಪು ಮದ್ದು ನೀಡುತ್ತಿದೆ. ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ ದರ ಮತ್ತು ಹಣದುಬ್ಬರ ಮಧ್ಯೆ ಸಂಬಂಧ ಇದೆಯೇ ಎನ್ನುವುದರತ್ತ ಚಿಂತಿಸಲು ಇದು ಸಕಾಲವಾಗಿದೆ.

ಮಾರುಕಟ್ಟೆಯಲ್ಲಿ ಹಣದ ಹರಿವು ಅತ್ಯಧಿಕ ಪ್ರಮಾಣದಲ್ಲಿ ಇದ್ದಿದ್ದರೆ, ನಿರಂತರವಾಗಿ ಬಡ್ಡಿ ದರ ಹೆಚ್ಚಳದಿಂದ ಅದರ ಪ್ರಮಾಣ ಕಡಿಮೆಯಾಗಿರಬೇಕಾಗಿತ್ತು. ಆದರೆ, ಈಗಲೂ ಹಣದುಬ್ಬರ ಗರಿಷ್ಠ ಮಟ್ಟದಲ್ಲಿಯೇ ಇದೆ~ ಎಂಬುದು ಕೆಲವರ ಅಂಬೋಣ.

ಸದ್ಯದ ಗರಿಷ್ಠ ಮಟ್ಟದ ಹಣದುಬ್ಬರಕ್ಕೆ ಆಹಾರ ಮತ್ತು ಇಂಧನಗಳ ದುಬಾರಿ ದರವೇ ಕಾರಣ. ನಿರಂತರವಾಗಿ ಬಡ್ಡಿ ದರ ಹೆಚ್ಚಿಸುತ್ತ ಬಂದಿರುವುದರಿಂದ ಉಕ್ಕು ಮತ್ತು ನಿರ್ಮಾಣ ರಂಗಕ್ಕೆ ಸಾಲದ ಹರಿವು ಕಡಿಮೆಯಾಗಿದೆ. ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ತಯಾರಿಕೆ ಮತ್ತು ಸೇವಾ ವಲಯಗಳು ಗಮನಾರ್ಹ ಕೊಡುಗೆ ನೀಡುತ್ತವೆ. ಈ ರಂಗಕ್ಕೆ ಅನ್ವಯಿಸಿ ಆರ್ಬಿಐ ಬಡ್ಡಿ ದರಗಳನ್ನು ತಗ್ಗಿಸಬೇಕಾಗಿತ್ತು ಎಂದು ತಜ್ಞರು ಹೇಳಿದ್ದಾರೆ.

ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಮತ್ತು ಬಡ್ಡಿ ದರ ಹೆಚ್ಚಳದ ಮಧ್ಯೆ ಸಂಬಂಧ ಇದೆ ಎನ್ನುವುದು ತಪ್ಪು ಕಲ್ಪನೆ. ಆದರೆ, ಮಾರುಕಟ್ಟೆಯಲ್ಲಿ ಈಗಲೂ ಹೆಚ್ಚುವರಿ ಹಣದ ಹರಿವು ಇರುವುದರಿಂದ ಹಣದುಬ್ಬರದ ನಿರೀಕ್ಷೆಗಳನ್ನು ನಿಯಂತ್ರಿಸಲು ಕಠಿಣ ಸ್ವರೂಪದ ಹಣಕಾಸು ನೀತಿಗಳು ಅಗತ್ಯ ಎಂದು ಇನ್ನೂ ಕೆಲ ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ರಿಯಲ್ ಎಸ್ಟೇಟ್ ರಂಗದಲ್ಲಿ ನಿರ್ಮಾಣ ಚಟುವಟಿಕೆಗಳು ಗರಿಷ್ಠ ಪ್ರಮಾಣದಲ್ಲಿ ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಪಡೆಯುವ ಒಟ್ಟು ಸಾಲದ ಪ್ರಮಾಣವೂ ಏರಿಕೆಯಾಗಿದೆ. ವಿದೇಶಿ ಬಂಡವಾಳ ಹೂಡಿಕೆಯೂ ಹೆಚ್ಚಿನ ಮಟ್ಟದಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.