ಶುಕ್ರವಾರ, ಮೇ 7, 2021
22 °C

ಆಳ್ವಾಸ್‌ಗೆ ವಾಜಪೇಯಿ ಕಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಫೂರ್ತಿ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ `ಅಟಲ್ ಬಿಹಾರಿ ವಾಜಪೇಯಿ ಕಪ್-2012~ ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜಯಾ ಬ್ಯಾಂಕ್ ಮತ್ತು ಆಳ್ವಾಸ್ ತಂಡಗಳು ಪ್ರಥಮ ಸ್ಥಾನ ಪಡೆದುಕೊಡಿವೆ.ರಾಜ್ಯದ ಪ್ರಮುಖ ತಂಡಗಳಾದ ಎಚ್‌ಎಎಲ್, ಬಿಎಸ್‌ಎನ್‌ಎಲ್, ಎಂಇಜಿ, ಎಎಸ್‌ಡಿ, ಸಿಎಎಲ್, ವಿಜಯಾ ಬ್ಯಾಂಕ್ ತಂಡಗಳಲ್ಲದೆ, ವಿವಿಧ ಜಿಲ್ಲೆಗಳಿಂದ 36 ಪುರುಷರ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಜೊತೆಗೆ ನಗರದ ಮಾತಾ ತಂಡ, ಮೂಡಬಿದರೆ ಅಳ್ವಾಸ್, ಪುತ್ತೂರಿನ ಸೇಂಟ್ ಫಿಲೋಮಿನಾ ತಂಡಗಳೂ ಸೇರಿದಂತೆ 4 ಮಹಿಳಾ ತಂಡಗಳು ಸ್ಪರ್ಧೆಯಲ್ಲಿ ಸೆಣೆಸಿದ್ದವು.ಸ್ಪರ್ಧೆಯ ವಿಜೇತರಿಗೆ ಸಾರಿಗೆ ಸಚಿವ ಆರ್. ಅಶೋಕ, ಮತ್ತು ಸತೀಶ್ ರೆಡ್ಡಿ ಬಹುಮಾನ ವಿತರಿಸಿದರು. ಪ್ರಥಮ ಸ್ಥಾನ ಪಡೆದುಕೊಂಡ ತಂಡಗಳಿಗೆ 50 ಸಾವಿರ ಬಹುಮಾನ ಹಾಗೂ ಅಟಲ್ ಬಿಹಾರಿ ವಾಜಪೇಯಿ ಕಪ್ ನೀಡಲಾಯಿತು.ದ್ವಿತೀಯ ಸ್ಥಾನ ಪಡೆದ ಎಚ್‌ಎಎಲ್ ತಂಡಕ್ಕೆ 30 ಸಾವಿರ ರೂಪಾಯಿ ಹಾಗೂ ತೃತೀಯ ಸ್ಥಾನದವರಿಗೆ 15 ಸಾವಿರ ನಗದು ನೀಡಲಾಯಿತು.ಬಿ.ಜೆ.ಪಿ ಮುಖಂಡ ಬಿ. ವೈ. ರಮೇಶ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ರಮೇಶ ಅತಿಥಿಯಾಗಿ ಭಾಗವಹಿಸಿದ್ದರು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.