ಸೋಮವಾರ, ಮೇ 10, 2021
25 °C

ಆಶ್ರಯ ನಿವಾಸಿಗಳನ್ನು ತೆರವುಗೊಳಿಸಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇಲ್ಲಿಯ ಎಸ್.ಎಸ್. ಕೃಷ್ಣನಗರದಲ್ಲಿ ನಿರ್ಮಿಸಲಾದ ಆಶ್ರಯ ಮನೆಗಳಲ್ಲಿ ವಾಸವಾಗಿರುವ ಜನರನ್ನು ತೆರವುಗೊಳಿಸಬಾರದು ಎಂದು ಆಗ್ರಹಿಸಿ ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರು ನೇತೃತ್ವದಲ್ಲಿ ನಡೆದ ಸಾರ್ವಜನಿಕರ ಸಭೆ ಪಾಲಿಕೆಯನ್ನು ಆಗ್ರಹಿಸಿತು.ಯಾವುದೇ ಸೌಲಭ್ಯಗಳು ಇಲ್ಲವೆಂದು ಮುಂಚಿನ ಫಲಾನುಭವಿಗಳು ಇಲ್ಲಿಯ ಮನೆಗಳನ್ನು ತೊರೆದು ಹೋಗಿದ್ದರು. ಯಾವುದೇ ಸೂರು ಇಲ್ಲದವರು 8-10 ವರ್ಷಗಳಿಂದ ಈ ಮನೆಗಳಲ್ಲಿ ವಾಸವಾಗಿದ್ದು, ಪಾಲಿಕೆ ಕಚೇರಿಯಲ್ಲಿ ತಮ್ಮ ಹೆಸರನ್ನೇ ದಾಖಲಿಸಿ ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಅವರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ ಎಂದು ಕಿತ್ತೂರು ಹೇಳಿದರು.ಇಲ್ಲಿಯ ಆಶ್ರಯ ಬಡಾವಣೆಗಳಲ್ಲಿ 1,600 ಮನೆಗಳಿದ್ದು, 700 ಮನೆಗಳ ನಿವಾಸಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪಾಲಿಕೆ ಅಧಿಕಾರಿಗಳು ಆ ನೋಟಿಸ್ ಹಿಂಪಡೆದು, ಹಾಲಿ ವಾಸವಾಗಿರುವ ಜನಕ್ಕೆ ಆ ಮನೆಗಳನ್ನು ಬಿಟ್ಟು ಕೊಡಬೇಕು ಎಂದು ಅವರು ಒತ್ತಾಯಿಸಿದರು. ಗೌಸುಸಾಬ್ ಕಾರಡಗಿ, ದೇವೇಂದ್ರಪ್ಪ ಇಟಗಿ, ಶಬ್ಬೀರ್ ನದಾಫ್, ರಾಜು ಮುಕ್ತಿಯಾರ್ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.