ನವದೆಹಲಿ (ಪಿಟಿಐ): ಲೋಕಾಯುಕ್ತದ ಬಗ್ಗೆ ಬಿಜೆಪಿ ಪ್ರಧಾನ-ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಮಾತನಾಡುವುದು ಆಸಾರಾಂ ಬಾಪು ತಮ್ಮ ಬ್ರಹ್ಮಚರ್ಯದ ಬಗ್ಗೆ ಮಾತನಾಡಿದಂತೆ ಎಂದು ಕೇಂದ್ರ ಸಚಿವ ಜೈರಾಂ ರಮೇಶ್ ವ್ಯಂಗ್ಯವಾಡಿದ್ದಾರೆ.

ಲೋಕಪಾಲ ಮಸೂದೆ ಬಗ್ಗೆ ಉತ್ತರಾಖಂಡದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವ ರನ್ನು ಮೋದಿ ಟೀಕಿ ಸಿದ್ದರ ಬಗ್ಗೆ ಪ್ರತಿಕ್ರಿ ಯಿಸಿದ ಜೈರಾಂ, ಲೈಂಗಿಕ ದೌರ್ಜನ್ಯ ಆರೋಪ ದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಆಸಾರಾಂ ಬಾಪು ಅವರನ್ನು ಮೋದಿ ಅವರಿಗೆ ಹೋಲಿಕೆ ಮಾಡಿದರು. ಮೋದಿ 10 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರೂ ಲೋಕಾಯುಕ್ತರನ್ನು ನೇಮಿಸದ ಅವರಿಗೆ ಭ್ರಷ್ಟಾಚಾರ ವಿರೋಧಿ ಶಾಸನದ ಬಗ್ಗೆ ಮಾತನಾಡಲು ಹಕ್ಕಿಲ್ಲ ಎಂದು ಅವರು ಹೇಳಿದರು.

ಉತ್ತರಾಖಂಡ ಸರ್ಕಾರದ ಲೋಕಾಯುಕ್ತ ಕಾಯಿದೆ ‘ಜೋಕ್’ ಎಂದು ಟೀಕಿಸಿದ ರಮೇಶ್, ಇದರಲ್ಲಿ ತೊಡಕುಗಳಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.