ಶನಿವಾರ, ಮೇ 8, 2021
27 °C

`ಆಸಿಡ್ ದಾಳಿ: ಅಲ್ಪ ಪರಿಹಾರ ಅವಮಾನಕರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): `ಆಸಿಡ್ ದಾಳಿಗೊಳಗಾಗಿ ಕೊನೆಯುಸಿರೆಳೆದ ಯುವತಿ ಕುಟುಂಬಕ್ಕೆ ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ ನೀಡಿರುವ ಪರಿಹಾರ ಅತ್ಯಲ್ಪವಾಗ್ದ್ದಿದು, ಇದು ಅತ್ಯಂತ ಅವಮಾನಕರ' ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಟೀಕಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಸುಷ್ಮಾ, `ಸರ್ಕಾರ ನೀಡಿರುವ ರೂ. 2 ಲಕ್ಷ ಪರಿಹಾರ ಮೊತ್ತವು ದಾಳಿಯಿಂದ ಮೃತಪಟ್ಟ ಯುವತಿಗೆ  ಮಾಡಿದ ಅವಮಾನ' ಎಂದಿದ್ದಾರೆ.ನರ್ಸ್ ಹುದ್ದೆಗೆ ಸೇರಲು ಬಂದಿದ್ದ ಪ್ರೀತಿ  ರತಿ (23) ಮೇಲೆ, ಮೇ 2ರಂದು ಇಲ್ಲಿನ ಬಾಂದ್ರಾ ರೈಲು ನಿಲ್ದಾಣದಲ್ಲಿ ಆಸಿಡ್ ದಾಳಿ ನಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.