ಮೆಲ್ಬರ್ನ್ (ಪಿಟಿಐ): ವಿಶ್ವಕಪ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಆಸ್ಟ್ರೇಲಿಯಾ ತಂಡಕ್ಕೆ ಹಿನ್ನಡೆ ಉಂಟಾಗಿದೆ. ಪ್ರಮುಖ ಬ್ಯಾಟ್ಸ್ಮನ್ ಮೈಕ್ ಹಸ್ಸಿ ಮತ್ತು ಸ್ಪಿನ್ನರ್ ನಥಾನ್ ಹೌರಿಜ್ ಅವರು ಗಾಯದ ಕಾರಣ ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ.

ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಇತ್ತೀಚೆಗೆ ನಡೆದ ಏಕದಿನ ಸರಣಿಯ ವೇಳೆ ಗಾಯಗೊಂಡಿದ್ದ ಇಬ್ಬರೂ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವಿಶ್ವಕಪ್ ವೇಳೆಗೆ ಇವರು ಚೇತರಿಸಿಕೊಳ್ಳುವುದು ಅನುಮಾನ ಎಂಬ ಕಾರಣದಿಂದ ತಂಡದಿಂದ ಕೈಬಿಡಲಾಗಿದೆ.

ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಇದೀಗ ಇವರ ಬದಲಿಗೆ ಕಾಲಮ್ ಫರ್ಗ್ಯುಸನ್ ಮತ್ತು ಜಾಸನ್ ಕ್ರೇಜಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಯಸಿದೆ. ಮಾತ್ರವಲ್ಲ ಈ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ (ಐಸಿಸಿ) ಮಾಹಿತಿ ನೀಡಿದೆ.

‘ಕ್ರಿಕೆಟ್ ಆಸ್ಟ್ರೇಲಿಯಾ ವೈದ್ಯಕೀಯ ತಂಡವು ರಾಷ್ಟ್ರೀಯ ಆಯ್ಕೆ ಸಮಿತಿಗೆ ತನ್ನ ವರದಿ ನೀಡಿದೆ. ಇದರ ಆಧಾರದಲ್ಲಿ ಹಸ್ಸಿ ಮತ್ತು ಹೌರಿಜ್ ಅವರಿಗೆ ಬದಲಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ನೀಡುವಂತೆ ಕೋರಿ ಐಸಿಸಿಗೆ ಪತ್ರ ಬರೆದಿದ್ದೇವೆ’ ಎಂದು ಸಿಎ ಆಯ್ಕೆ ಸಮಿತಿ ಮುಖ್ಯಸ್ಥ ಆ್ಯಂಡ್ರ್ಯೂ ಹಿಲ್ಡಿಚ್ ಹೇಳಿದರು.

‘ಹಸ್ಸಿ ಬದಲು ಫರ್ಗ್ಯುಸನ್ಗೆ ಹಾಗೂ ಹೌರಿಜ್ ಬದಲು ಕ್ರೇಜಾ ಅವರಿಗೆ ತಂಡದಲ್ಲಿ ಅವಕಾಶ ನೀಡುವಂತೆ ಕೋರಿ ಐಸಿಸಿ ತಾಂತ್ರಿಕ ಸಮಿತಿಗೆ ತಿಳಿಸಿದ್ದೇವೆ’ ಎಂದರು.
ಕೈಬೆರಳಿನ ಗಾಯದಿಂದ ಬಳಲುತ್ತಿರುವ ರಿಕಿ ಪಾಂಟಿಂಗ್ ಇದೀಗ ಚೇತರಿಸಿಕೊಂಡಿದ್ದು, ಪ್ರತಿದಿನ ಅಭ್ಯಾಸ ನಡೆಸುತ್ತಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಫಿಸಿಯೊ ಅಲೆಕ್ಸ್ ಕೌಂಟಾರಿಸ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.