ಪೋರ್ಟ್ ಆಫ್ ಸ್ಪೇನ್ (ಪಿಟಿಐ): ಆಫ್ ಸ್ಪಿನ್ನರ್ ನಥಾನ್ ಲಿನ್ (68ಕ್ಕೆ 5) ತೋರಿದ ಸಮರ್ಥ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.

ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ಮೂರನೇ ದಿನವಾದ ಮಂಗಳವಾರದ ಆಟದ ಅಂತ್ಯಕ್ಕೆ ವಿಂಡೀಸ್ ತನ್ನ ಮೊದಲ ಇನಿಂಗ್ಸ್ನಲ್ಲಿ 104 ಓವರುಗಳಲ್ಲಿ 9 ವಿಕೆಟ್ಗೆ 252 ರನ್ ಗಳಿಸಿದೆ. ಇದೀಗ ಇನಿಂಗ್ಸ್ ಹಿನ್ನಡೆ ತಪ್ಪಿಸಲು ಇನ್ನೂ 59 ರನ್ಗಳ ಅಗತ್ಯವಿದೆ.

ಮೂರು ವಿಕೆಟ್ ನಷ್ಟಕ್ಕೆ 49 ರನ್ಗಳಿಂದ ಆಟ ಆರಂಭಿಸಿದ ವಿಂಡೀಸ್ ಆರಂಭಿಕ ಕುಸಿತದಿಂದ ಪಾರಾಗುವಲ್ಲಿ ಯಶಸ್ವಿಯಾಗಿತ್ತು. ಶಿವನಾರಾಯಣ ಚಂದ್ರಪಾಲ್ (94) ಮತ್ತು ನರಸಿಂಗ ಡಿಯೊನರೇನ್ (55) ಅವರ ಉತ್ತಮ ಆಟ ಇದಕ್ಕೆ ಕಾರಣ. ಇವರಿಬ್ಬರು ಐದನೇ ವಿಕೆಟ್ಗೆ 130 ರನ್ ಸೇರಿಸಿದರು. ಆದರೆ ನಾಲ್ಕು ವಿಕೆಟ್ಗೆ 230 ರನ್ ಗಳಿಸಿದ್ದ ಆತಿಥೇಯ ತಂಡ ದಿನದ ಅಂತಿಮ ಅವಧಿಯಲ್ಲಿ ಹಠಾತ್ ಕುಸಿತ ಕಂಡಿತು.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 135 ಓವರುಗಳಲ್ಲಿ 311. ವೆಸ್ಟ್ ಇಂಡೀಸ್: ಮೊದಲ ಇನಿಂಗ್ಸ್ 104 ಓವರುಗಳಲ್ಲಿ 9 ವಿಕೆಟ್ಗೆ 252 (ಶಿವನಾರಾಯಣ ಚಂದ್ರಪಾಲ್ 94, ನರಸಿಂಗ ಡಿಯೊನರೇನ್ 55, ನಥಾನ್ ಲಿನ್ 68ಕ್ಕೆ 5, ಮೈಕ್ ಹಸ್ಸಿ 19ಕ್ಕೆ 1, ಮೈಕಲ್ ಬೀರ್ 52ಕ್ಕೆ1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.