ಆಸ್ಟ್ರೇಲಿಯಾ ಬಳಿ ಪ್ರಬಲ ಭೂಕಂಪ

ಭಾನುವಾರ, ಮೇ 26, 2019
25 °C

ಆಸ್ಟ್ರೇಲಿಯಾ ಬಳಿ ಪ್ರಬಲ ಭೂಕಂಪ

Published:
Updated:

ಸಿಡ್ನಿ (ಎಎಫ್‌ಪಿ): ದಕ್ಷಿಣ ಪೆಸಿಫಿಕ್ ದ್ವೀಪದ ವ್ಯಾನೌತುವ್ ಕಡಲ ತೀರದುದ್ದಕ್ಕೂ ಭಾನುವಾರ  ಪ್ರಬಲ ಭೂಕಂಪ ಆಗಿದೆ. ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆಯ ಭೂಕಂಪ ಆಗಿದೆ ಆದರೆ ಸುನಾಮಿ ಅಲೆಗಳ ಭೀತಿ ಇಲ್ಲ  ಎಂದು ಅಮೆರಿಕದ ಭೂಗರ್ಭವಿಜ್ಞಾನ ಸರ್ವೇಕ್ಷಣಾಲಯ ಹೇಳಿದೆ.ಭೂಕಂಪನದಿಂದ ವಿಧ್ವಂಸಕ ಸುನಾಮಿ ಅಲೆ ಎದ್ದಿಲ್ಲ ಎಂದು ಪೆಸಿಫಿಕ್ ಸುನಾಮಿ ಮುನ್ನೆಚ್ಚರಿಕೆ ಕೇಂದ್ರ ತಿಳಿಸಿದೆ.

ವ್ಯಾನೌತುವ್ ರಾಜಧಾನಿ ಪೋರ್ಟ್ ವಿಲಾದ ವಾಯುವ್ಯ ಭಾಗದಲ್ಲಿ 350 ಕಿಮೀ ವಿಸ್ತಾರದಲ್ಲಿ ಮತ್ತು 132 ಕಿಮೀ ಆಳದವರೆಗೆ ಭೂಮಿ ಕಂಪಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry