ಮಂಗಳವಾರ, ಜನವರಿ 28, 2020
18 °C
ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ: ಅರ್ಥಪೂರ್ಣ ಆಚರಣೆ

ಆಸ್ಪತ್ರೆಯಲ್ಲಿ ಬಡ ಮಕ್ಕಳಿಗೆ ತೊಟ್ಟಿಲು ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ನಗರದಲ್ಲಿ ಶುಕ್ರವಾರ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.ವಿವಿಧ ದಲಿತ ಸಂಘಟನೆಗಳ ಪ್ರಮುಖರು ಸ್ಥಳೀಯ  ಡಾ.ಅಂಬೇಡ್ಕರ್ ವೃತ್ತದಲ್ಲಿ ಸಮಾವೇ ಶಗೊಂಡು ಅಂಬೇಡ್ಕರ್ ಪುತ್ಥಳಿಗೆ ಪೂಜೆ ಸಲ್ಲಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಅಶ್ವಥನಾ ರಾಯಣ ಶಾಸ್ರ್ತಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟ ತ್ರಿವಳಿ ತತ್ವವನ್ನು ಪ್ರತಿಯೊಬ್ಬ ದಲಿತರು ತಮ್ಮ ಬದುಕಿನ ಮಂತ್ರದಂತೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ದಲಿತರು ಶಿಕ್ಷಣದಿಂದ ಹಿಂದೆ ಬೀಳುತ್ತಿರು ವುದು ಕಂಡು ಬರುತ್ತಿದೆ. ಹೀಗಾಗಬಾರದು ಪ್ರತಿಯೊ ಬ್ಬರು ವಿದ್ಯಾವಂತರಾಗುವ ಮೂಲಕ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪುರಸಭೆ ಸಭೆ ಸದಸ್ಯ, ದಲಿತ ಮುಖಂಡ ರಾಜಶೇಖರ ಕೂಚಬಾಳ ಮಾತನಾಡಿ, ಡಿಸೆಂ ಬರ್ 6, ಡಾ.ಅಂಬೇಡ್ಕರ್ ನಿಧನರಾದ ದಿನವೇ  ದಕ್ಷಿಣ ಆಫ್ರಿಕಾದ ಗಾಂಧಿ ಎಂದೇ ಖ್ಯಾತರಾಗಿದ್ದ ನೆಲ್ಸನ್ ಮಂಡೇಲಾ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಎರಡು ನಿಮಿಷ ಮೌನ ಆಚರಿಸುವಂತೆ ಕೇಳಿಕೊಂಡರು.ಮಲ್ಲೂ ಕೂಚಬಾಳ ಪ್ರಾರ್ಥನೆ ಗೀತೆ ಹಾಡಿದರು. ಪುರಸಭೆ ಮುಖ್ಯಾಧಿಕಾರಿ ರಮೇಶ ನಾಯಕ, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಮಹೇಶ ಪೋದ್ದಾರ, ಕೆಜೆಪಿ ಎಸ್.ಸಿ, ಎಸ್.ಟಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್. ಕಿರಣರಾಜ್, ವಿವಿಧ ದಲಿತ ಸಂಘಟನೆಗಳ ಪ್ರಮುಖರಾದ ಅಶೋಕ ಸುಲ್ಪಿ, ಸಂತೋಷ ಮಣಿಗಿರಿ, ಸಾಹೇಬಣ್ಣ ಪುರದಾಳ, ರಾಜೂ ಗುಬ್ಬೇವಾಡ, ಸಂದೀಪ ಚೌರ, ಮಲ್ಲೇಶಿ ಕೆರೂರ, ಗೋಪಿ ಬಡಿಗೇರ, ಸಂತೋಷ ಭಜಂತ್ರಿ, ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ ಮತ್ತು ಎಸ್.ಟಿ ನೌಕರರ ಸಮನ್ವಯ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ರಮೇಶ ರಾಠೋಡ, ಉಪಾಧ್ಯಕ್ಷ ಸಿ.ಜಿ.ಗಡಗಿ, ಪ್ರಧಾನಕಾರ್ಯದರ್ಶಿ ಎಂ.ಎಸ್.ಧರೇನ್ನವರ, ಎಸ್.ಪಿ.ಕಾಂಬಳೆ, ಎಂ.ಎಂ. ಪಾತ್ರೋಟಿ, ಬಿ.ಎಂ. ಬಾಗೇವಾಡಿ, ಬಿ.ಕೆ.ವಾಘಮೋರೆ, ಎಸ್.ಪಿ. ಸಾಲೋಟಗಿ, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಹಾವಿ ನಾಳ, ರಾಜಕುಮಾರ ನರಗೋದಿ ಉಪಸ್ಥಿತರಿದ್ದರು.ತೊಟ್ಟಿಲುಗಳ ವಿತರಣೆ

ಸಿಂದಗಿ:
ಡಾ.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನಾಚರಣೆ ಅಂಗವಾಗಿ ಶುಕ್ರವಾರ  ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ, ಎಸ್.ಟಿ ನೌಕರರ ಸಮನ್ವಯ ಸಮಿತಿ ತಾಲ್ಲೂಕು ಘಟಕದ ವತಿಯಿಂದ 10 ತೊಟ್ಟಿಲುಗಳನ್ನು ವಿತರಿಸಲಾಯಿತು.

ಸಮಿತಿ ಅಧ್ಯಕ್ಷ ಡಾ.ರಮೇಶ ರಾಠೋಡ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಶಕ್ತಿ ನಿಯಂತ್ರಣ ಶಸ್ತ್ರ ಚಿಕಿತ್ಸೆಗೊಳಗಾದ ಮಹಿಳೆಯರು ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ. ಹೀಗಾಗಿ ತಮ್ಮ ಮಕ್ಕಳನ್ನು ನೆಲದ ಮೇಲೆ ಮಲಗಿಸುವ ಪರಿಸ್ಥಿತಿ ಇದ್ದುದರಿಂದ ತಮ್ಮ ಸಮಿತಿಯಿಂದ ಈಗ 10 ತೊಟ್ಟಲುಗಳನ್ನು ನೀಡಲಾಗಿದೆ. ಇದೇ ರೀತಿ ತಾಲ್ಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ತೊಟ್ಟಿಲುಗಳನ್ನು ವಿತರಿಸುವ ಸದುದ್ದೇಶ ಹೊಂದಿದೆ ಎಂಬ ಇಂಗಿತ ವ್ಯಕ್ತಪಡಿಸಿದರು.

ನಂತರ ಆಸ್ಪತ್ರೆಯಲ್ಲಿನ ಒಳ ರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು.

ಆಸ್ಪತ್ರೆ ಆಡಳಿತಾಧಿಕಾರಿ ಡಾ.ಹಾವಿನಾಳ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)