ಸೋಮವಾರ, ಮೇ 16, 2022
30 °C

ಆ್ಯಪಲ್ ಸಹ ಸ್ಥಾಪಕ ಸ್ಟೀವ್ ಜಾಬ್ಸ್ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್/ನವದೆಹಲಿ (ಪಿಟಿಐ): ವಿಶ್ವದ ಮುಂಚೂಣಿ ತಂತ್ರಜ್ಞಾನ ಸಂಸ್ಥೆ ಆ್ಯಪಲ್‌ನ ಸಹ ಸ್ಥಾಪಕ ಸ್ಟೀವ್ ಜಾಬ್ಸ್ ಅವರು ಗುರುವಾರ ನಿಧನರಾದರು. ಅವರಿಗೆ  56 ವರ್ಷ ವಯಸ್ಸಾಗಿತ್ತು.

 

ಸ್ಟೀವ್ಸ್ ಅವರು ಕಳೆದ ಏಳು ವರ್ಷಗಳಿಂದ ಮೇದೋಜಿರಕ ಗ್ರಂಥಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು.ಇತ್ತೀಚೆಗಷ್ಟೇ ತಾವು ಸ್ಥಾಪಿಸಿದ ಆ್ಯಪಲ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರ ಅಧಿಕಾರಿ (ಸಿಇಓ) ಹುದ್ದೆಗೆ ರಾಜೀನಾಮೆ ನೀಡಿದ್ದರು.ಕ್ಯಾಲಿಫೋರ್ನಿಯಾದ ಆಸ್ಪತ್ರೆಯಲ್ಲಿ ಜಾಬ್ಸ್ ನಿಧನರಾಗಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ. `ಸ್ಟೀವ್ ಜಾಬ್ಸ್ ಅವರು ನಮ್ಮನ್ನು ಅಗಲಿದ್ದಾರೆ~ ಎಂಬ ಚುಟುಕು ಪ್ರಕಟಣೆಯನ್ನು ಆ್ಯಪಲ್ ಕಂಪೆನಿಯ ನಿರ್ದೇಶಕ ಮಂಡಳಿ ನೀಡಿದೆ.

 

ಸ್ಟೀವ್ಸ್ ನಿಧನದೊಂದಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಧ್ರುವತಾರೆಯೊಂದು ಅಸ್ತಮಿಸಿದಂತಾಗಿದೆ. ಜಾಬ್ಸ್  ಮರೆಯಾದರೂ ಅವರ ಹಲವಾರು ಸಾಧನೆಗಳು ಇವರನ್ನು ಅಜರಾಮರವಾಗಿಸಿವೆ.ಇವರ ನಿಧನದ ಸುದ್ದಿ ಹರಡುತ್ತಿದ್ದಂತೆ ವಿಶ್ವಾದ್ಯಂತ ಗಣ್ಯರು ಕಂಬನಿ ಮಿಡಿದಿದ್ದಾರೆ.ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ದೂರದೃಷ್ಟಿವುಳ್ಳ ಸಾಧಕನೊಬ್ಬನನ್ನು ವಿಶ್ವ ಕಳೆದು ಕೊಂಡಿದೆ ಎಂದು ಶೋಕಿಸಿದ್ದಾರೆ.ಸಂಪರ್ಕ ಮತ್ತು ಸಂಹವನದ ಹೊಸ ಹೊಸ ಮಾರ್ಗಗಳನ್ನು ಜಗತ್ತಿಗೆ ಪರಿಚಯಿಸಿದ ಸಾಧಕನನ್ನು ವಿಶ್ವ ಕಳೆದುಕೊಂಡಿದೆ ಎಂದು ಪ್ರಧಾನಮಂತ್ರಿ ಮನಮೋಹನಸಿಂಗ್ ಅವರು ಅತೀವ ದು:ಖ ವ್ಯಕ್ತಪಡಿಸಿದ್ದಾರೆ.

ಗ್ರೇಟ್ ಜಾಬ್ಸ್!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.