ಅಡಿಲೇಡ್ (ಎಎಫ್ಪಿ): ಮಿಷೆಲ್ ಜಾನ್ಸನ್ (40ಕ್ಕೆ 7) ತೋರಿದ ಸಮರ್ಥ ಬೌಲಿಂಗ್ ದಾಳಿಗೆ ನಡುಗಿದ ಇಂಗ್ಲೆಂಡ್ ತಂಡ ಆ್ಯಷಸ್ ಕ್ರಿಕೆಟ್ ಸರಣಿಯ ಎರಡನೇ ಟೆಸ್ಟ್ನಲ್ಲೂ ಸೋಲಿನ ಅಪಾಯಕ್ಕೆ ಸಿಲುಕಿದೆ.

ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ ಅಲಸ್ಟೇರ್ ಕುಕ್ ಬಳಗ 172 ರನ್ಗಳಿಗೆ ಆಲೌಟಾಯಿತು. ಈ ಮೂಲಕ ಆಸ್ಟ್ರೇಲಿಯಾಕ್ಕೆ 398 ರನ್ಗಳ ಮುನ್ನಡೆ ಬಿಟ್ಟುಕೊಟ್ಟಿತು.

ಇಂಗ್ಲೆಂಡ್ಗೆ ಫಾಲೋಆನ್ ನೀಡದೆ ಎರಡನೇ ಇನಿಂಗ್ಸ್ ಆರಂಭಿಸಿರುವ ಮೈಕಲ್ ಕ್ಲಾರ್ಕ್ ಬಳಗ ದಿನದಾಟದ ಅಂತ್ಯಕ್ಕೆ 39 ಓವರ್ಗಳಲ್ಲಿ 3 ವಿಕೆಟ್ಗೆ 132 ರನ್ ಗಳಿಸಿತ್ತು. ಈ ಮೂಲಕ ಒಟ್ಟಾರೆ ಮುನ್ನಡೆಯನ್ನು 530 ರನ್ಗಳಿಗೆ ಹೆಚ್ಚಿಸಿಕೊಂಡಿದೆ. ಆಸೀಸ್ ತಂಡ ಕ್ರಿಸ್ ರೋಜರ್ಸ್ ಮತ್ತು ಶೇನ್ ವಾಟ್ಸನ್ ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಡೇವಿಡ್ ವಾರ್ನರ್ (ಬ್ಯಾಟಿಂಗ್ 83) ಹಾಗೂ ಸ್ಟೀವನ್ ಸ್ಮಿತ್ (ಬ್ಯಾಟಿಂಗ್ 23) ತಂಡಕ್ಕೆ ಆಸರೆಯಾದರು.
ಇದಕ್ಕೂ ಮುನ್ನ ಒಂದು ವಿಕೆಟ್ ನಷ್ಟಕ್ಕೆ 35 ರನ್ಗಳಿಂದ ಆಟ ಮುಂದುವರಿಸಿದ ಇಂಗ್ಲೆಂಡ್ ತಂಡ ಜಾನ್ಸನ್ ದಾಳಿಗೆ ತತ್ತರಿಸಿತು. ಮೈಕಲ್ ಕಾರ್ಬೆರಿ (60) ಮತ್ತು ಇಯಾನ್ ಬೆಲ್ (ಔಟಾಗದೆ 72) ಅವರನ್ನು ಹೊರತುಪಡಿಸಿ ಇತರ ಎಲ್ಲರೂ ಬೇಗನೇ ಪೆವಿಲಿಯನ್ಗೆ ಮರಳಿದರು.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್: 158 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 570 ಡಿಕ್ಲೇರ್ಡ್ ಮತ್ತು ಎರಡನೇ ಇನಿಂಗ್ಸ್ 39 ಓವರ್ಗಳಲ್ಲಿ 3 ವಿಕೆಟ್ಗೆ 132 (ಡೇವಿಡ್ ವಾರ್ನರ್ ಬ್ಯಾಟಿಂಗ್ 83, ಮೈಕಲ್ ಕ್ಲಾರ್ಕ್ 22, ಸ್ಟೀವನ್ ಸ್ಮಿತ್ ಬ್ಯಾಟಿಂಗ್ 23, ಜೇಮ್ಸ್ ಆ್ಯಂಡರ್ಸನ್ 19ಕ್ಕೆ 2) ಇಂಗ್ಲೆಂಡ್: ಮೊದಲ ಇನಿಂಗ್ಸ್ 68.2 ಓವರ್ಗಳಲ್ಲಿ 172 (ಮೈಕಲ್ ಕಾರ್ಬೆರಿ 60, ಇಯಾನ್ ಬೆಲ್ ಔಟಾಗದೆ 72, ಮಿಷೆಲ್ ಜಾನ್ಸನ್ 40ಕ್ಕೆ 7)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.