ಇಂಗ್ಲೆಂಡಿ‌ನ ಪ್ರಥಮ ಸಿಖ್ ನ್ಯಾಯಮೂರ್ತಿ ರಣಬೀರ್ ಸಿಂಗ್

7

ಇಂಗ್ಲೆಂಡಿ‌ನ ಪ್ರಥಮ ಸಿಖ್ ನ್ಯಾಯಮೂರ್ತಿ ರಣಬೀರ್ ಸಿಂಗ್

Published:
Updated:

ಲಂಡನ್ (ಪಿಟಿಐ): ವಲಸೆ ಬಂದಿದ್ದ ಭಾರತೀಯ ವೈದ್ಯರ ಪರವಾಗಿ  2007ರ ಒಂದು ಪ್ರಕರಣದಲ್ಲಿ ಯಶಸ್ವಿಯಾಗಿ ವಾದ ಮಂಡಿಸಿದ್ದ ಅತ್ಯಂತ ಬೇಡಿಕೆಯಲ್ಲಿರುವ ಇಲ್ಲಿನ ಹೆಸರಾಂತ ವಕೀಲ ರಣಬೀರ್ ಸಿಂಗ್ ಅವರು, ಇಲ್ಲಿನ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇದರೊಂದಿಗೆ ಶಿಖ್ ಸಮುದಾಯಕ್ಕೆ ಸೇರಿದ ಇಲ್ಲಿನ ಮೊದಲ ನ್ಯಾಯಮೂರ್ತಿಗಳೆಂಬ ಹೆಗ್ಗಳಿಕೆಗೆ ರಣಬೀರ್ ಸಿಂಗ್ ಅವರು ಪಾತ್ರರಾದರು.ಇದಕ್ಕೂ ಮೊದಲು ಹಲವಾರು ಮಂದಿ ಶಿಖ್ ಸಮುದಾಯದವರು ನ್ಯಾಯಾಂಗದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆದರೆ ರಣಬೀರ್ ಸಿಂಗ್ ಅವರಂತೆ ಯಾರೂ ಇದುವರೆಗೂ  ಹೈಕೋರ್ಟ್  ನ್ಯಾಯಮೂರ್ತಿಗಳಾಗಿರಲಿಲ್ಲ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry