ಫಟುಲ್ಲಾ: ಕ್ರಿಸ್ ಗೇಲ್ ಮತ್ತೆ ಗುಡುಗಲು ಆರಂಭಿಸಿದ್ದಾರೆ. ಅವರ ಬಿರುಸಿನ ಆಟದ ನೆರವಿನಿಂದ ವೆಸ್ಟ್ಇಂಡೀಸ್ ತಂಡದವರು ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸಿದ್ಧತೆಗಾಗಿ ಇಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್ಗಳಿಂದ ಮಣಿಸಿದ್ದಾರೆ.

ಖಾನ್ ಸಾಹೇಬ್ ಒಸ್ಮಾನ್ ಅಲಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೇವಲ 131 ರನ್. ಈ ಸುಲಭ ಗುರಿಯನ್ನು ಕೆರಿಬಿಯನ್ ಬಳಗ 16.1 ಓವರ್ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು ತಲುಪಿತು.

ಮಾರ್ಗನ್ ಬಲ: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಮುಂದಾದ ಆಂಗ್ಲರಿಗೆ ಉತ್ತಮ ಆರಂಭ ಸಿಗಲಿಲ್ಲ. ಜೊತೆಗೆ ರನ್ ವೇಗಕ್ಕೂ ಕಡಿವಾಣ ಬಿತ್ತು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಎಯೋನ್ ಮಾರ್ಗನ್ ಈ ತಂಡಕ್ಕೆ ಆಸರೆಯಾದರು. 42 ಎಸೆತಗಳನ್ನು ಎದುರಿದ ಅವರು ಒಂದು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಸಮೇತ ಅಜೇಯ 43 ರನ್ ಗಳಿಸಿದರು. ವಿಂಡೀಸ್ನ ಸ್ಯಾಮುಯೆಲ್ ಬದ್ರಿ ಅವರು ಬಿಗಿ ಬೌಲಿಂಗ್ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರು.

ಉತ್ತಮ ಆರಂಭ: ಸುಲಭ ಗುರಿ ಎದುರು ಕೆರಿಬಿಯನ್ ಬಳಗಕ್ಕೆ ಉತ್ತಮ ಆರಂಭ ಲಭಿಸಿತು. ಈ ತಂಡದ ಆರಂಭಿಕ ಬ್ಯಾಟ್ಸ್ಮನ್ಗಳಾದ ಡ್ವೇನ್ ಸ್ಮಿತ್ ಹಾಗೂ ಕ್ರಿಸ್ ಗೇಲ್ ಬಿರುಸಿನ ಆಟಕ್ಕೆ ಮುಂದಾದರು. ಮೊದಲ ವಿಕೆಟ್ಗೆ ಕೇವಲ 51 ಎಸೆತಗಳಲ್ಲಿ 78 ರನ್ ಕಲೆಹಾಕಿದರು.

ಆದರೆ ಸ್ಮಿತ್ (36; 30 ಎಸೆತ) ಅವರ ಪತನದ ಬಳಿಕ ವಿಂಡೀಸ್ ಆತಂಕಕ್ಕೆ ಸಿಲುಕಿತು. ಏಕೆಂದರೆ ನಂತರ ಬಂದ ಜಾನ್ಸನ್ ಚಾರ್ಲ್ಸ್ ಹಾಗೂ ಮಾರ್ಲೊನ್ ಸ್ಯಾಮುಯೆಲ್ಸ್ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಈ ಆಘಾತದ ನಡುವೆಯೂ ಗೇಲ್ ಆರ್ಭಟಿಸಿದರು. ಪರಿಣಾಮ ವೆಸ್ಟ್ಇಂಡೀಸ್ ಗೆಲುವಿನ ಗೆರೆ ಮುಟ್ಟಿತು. 38 ಎಸೆತ ಎದುರಿಸಿದ ಗೇಲ್ ಅಜೇಯ 58 ರನ್ ಗಳಿಸಿದರು. ಅವರ ಈ ಭರ್ಜರಿ ಆಟದಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ಗಳಿದ್ದವು.

ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 131 (ಮೊಯಿನ್ ಅಲಿ 22, ಎಯೋನ್ ಮಾರ್ಗನ್ ಔಟಾಗದೆ 43, ರವಿ ಬೋಪಾರ 15; ಕ್ರಿಶ್ಮಾರ್ 24ಕ್ಕೆ3, ಶೆಲ್ಡೋನ್ ಕಾಟ್ರೆಲ್ 23ಕ್ಕೆ2); ವೆಸ್ಟ್ಇಂಡೀಸ್: 16.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 132 (ಡ್ವೇನ್ ಸ್ಮಿತ್ 36, ಕ್ರಿಸ್ ಗೇಲ್ ಔಟಾಗದೆ 58, ಲೆಂಡ್ಲ್ ಸಿಮನ್ಸ್ ಔಟಾಗದೆ 15; ಜೇಮ್ಸ್ ಟ್ರೆಡ್ವೆಲ್ 23ಕ್ಕೆ1, ರವಿ ಬೋಪಾರ 20ಕ್ಕೆ1): ಫಲಿತಾಂಶ: ವೆಸ್ಟ್ಇಂಡೀಸ್ಗೆ 7 ವಿಕೆಟ್ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.