ಭಾನುವಾರ, ಮೇ 9, 2021
26 °C

ಇಂಗ್ಲೆಂಡ್ ಉತ್ತಮ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ (ಎಎಫ್‌ಪಿ): ಅಲಸ್ಟರ್ ಕುಕ್ (ಅಜೇಯ 77) ಮತ್ತು ಆ್ಯಂಡ್ರ್ಯೂ ಸ್ಟ್ರಾಸ್ (61) ಗಳಿಸಿದ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದೆ.ಪಿ. ಸಾರಾ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಬುಧವಾರ ಇಂಗ್ಲೆಂಡ್ 66 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 154 ರನ್ ಗಳಿಸಿದೆ. ಸ್ಟ್ರಾಸ್  ಮತ್ತು ಕುಕ್  ಮೊದಲ ವಿಕೆಟ್‌ಗೆ 122 ರನ್‌ಗಳನ್ನು ಸೇರಿಸಿ ಇಂಗ್ಲೆಂಡ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು.ದಿನದಾಟದ ಅಂತ್ಯಕ್ಕೆ ಜೊನಾಥನ್ ಟ್ರಾಟ್ (15) ಅವರು ಕುಕ್ ಜೊತೆ ಕ್ರೀಸ್‌ನಲ್ಲಿದ್ದರು. ಇಂಗ್ಲೆಂಡ್ ಇನ್ನೂ 121 ರನ್‌ಗಳಿಂದ ಹಿನ್ನಡೆಯಲ್ಲಿದೆ.ಇದಕ್ಕೂ ಮುನ್ನ 6 ವಿಕೆಟ್‌ಗೆ 238 ರನ್‌ಗಳಿಂದ ದಿನದಾಟ ಮುಂದುವರಿಸಿದ ಶ್ರೀಲಂಕಾ ತನ್ನ ಮೊದಲ ಇನಿಂಗ್ಸ್‌ನಲ್ಲಿ 275 ರನ್‌ಗಳಿಗೆ ಆಲೌಟಾಯಿತು. ಏಂಜೆಲೊ ಮ್ಯಾಥ್ಯೂಸ್ 57 ರನ್ ಗಳಿಸಿ ಔಟಾದರು. 75 ರನ್ ನೀಡಿ ನಾಲ್ಕು ವಿಕೆಟ್ ಪಡೆದ ಗ್ರೇಮ್ ಸ್ವಾನ್ ಇಂಗ್ಲೆಂಡ್ ಪರ ಯಶಸ್ವಿ ಬೌಲರ್ ಎನಿಸಿಕೊಂಡರು.ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: ಮೊದಲ ಇನಿಂಗ್ಸ್ 111.1 ಓವರ್‌ಗಳಲ್ಲಿ 275 (ಏಂಜೆಲೊ ಮ್ಯಾಥ್ಯೂಸ್ 57, ಸೂರಜ್ ರಂದೀವ್ 12, ಗ್ರೇಮ್ ಸ್ವಾನ್ 75ಕ್ಕೆ 4, ಜೇಮ್ಸ ಆ್ಯಂಡರ್‌ಸನ್ 62ಕ್ಕೆ 3, ಟಿಮ್ ಬ್ರೆಸ್ನನ್ 47ಕ್ಕೆ 2).ಇಂಗ್ಲೆಂಡ್: ಮೊದಲ ಇನಿಂಗ್ಸ್ 66 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 154 (ಆ್ಯಂಡ್ರ್ಯೂ ಸ್ಟ್ರಾಸ್ 61, ಅಲಸ್ಟರ್ ಕುಕ್ ಬ್ಯಾಟಿಂಗ್ 77, ಜೊನಾಥನ್ ಟ್ರಾಟ್ ಬ್ಯಾಟಿಂಗ್ 15)

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.