ಸೋಮವಾರ, ಮಾರ್ಚ್ 8, 2021
26 °C

ಇಂಟರ್‌ನೆಟ್‌ ಬ್ರೌಸಿಂಗ್‌ ಕೇಂದ್ರವಾದ ತಂಗುದಾಣ

ಬಸವರಾಜ ಮರಳಿಹಳ್ಳಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಟರ್‌ನೆಟ್‌ ಬ್ರೌಸಿಂಗ್‌ ಕೇಂದ್ರವಾದ ತಂಗುದಾಣ

ಹೊಸಪೇಟೆ: ಪ್ರಯಾಣಿಕರಿಗಾಗಿ ಬಳಕೆ ಯಾಗಬೇಕಿದ್ದ ನಗರದ ಕಾಲೇಜು ರಸ್ತೆಯಲ್ಲಿ ನಿರ್ಮಿಸಿರುವ ಬಸ್‌ ತಂಗು ದಾಣವೊಂದು ಇಂಟರ್‌ನೆಟ್‌ ಬ್ರೌಸಿಂಗ್‌ ಸೆಂಟರ್‌ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದೆ.ವಕೀಲರಾಗಿದ್ದ ದಿವಂಗತ ಎಚ್‌ಎಂಎಚ್‌ ಗುರುಶಂಕರಯ್ಯ ಅವರ ಮಕ್ಕಳು ನಿರ್ಮಿಸಿರುವ ಈ ತಂಗು ದಾಣದಲ್ಲಿ ಇಂಟರ್‌ನೆಟ್ ವೈ ಫೈ ಸೌಲಭ್ಯ ಒದಗಿಸಲಾಗಿದೆ.ಇದರಿಂದ ಈ ನಿಲ್ದಾಣ ಕಾಲೇಜು ವಿದ್ಯಾರ್ಥಿಗಳ ಹಾಗೂ ಸ್ಮಾರ್ಟ್‌ ಫೋನ್‌ ಹೊಂದಿ­ರುವ ಯುವಕರಿಗೆ ಇಂಟರ್‌ನೆಟ್‌ ಬ್ರೌಸಿಂಗ್‌ ಕೇಂದ್ರವಾಗಿದೆ.ದಿನದ 24 ಗಂಟೆಗಳ ಕಾಲ ಇಂಟರ್‌ನೆಟ್‌ ಸೌಲಭ್ಯ ಇರುವುದರಿಂದ ಬೆಳಿಗ್ಗೆಯಿಂದ ಸಂಜೆ ವರೆಗೂ ಪಡ್ಡೆ ಹುಡುಗರ ದಂಡೆ ಇಲ್ಲಿ ಬೀಡು ಬಿಡುತ್ತಿದ್ದು, ಸ್ಮಾರ್ಟ್‌ ಫೋನ್‌ಗಳಲ್ಲಿ ಇಂಟರ್‌ನೆಟ್‌ ಬಳಕೆ ಮಾಡುತ್ತಿದ್ದಾರೆ. ಕೆಲವು ಯುವಕರಂತೂ ಇಂಟರ್‌ನೆಟ್‌ ಬ್ರೌಸಿಂಗ್‌ ಮಾಡಲು ದಿನವಿಡಿ ಕುಳಿತುಕೊಂಡಿರುತ್ತಾರೆ.ವಿಜಯನಗರ ಕಾಲೇಜು, ಶ್ರೀಮಾತಾ ಪದವಿ ಕಾಲೇಜು, ಸರ್ಕಾರಿ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಬಸ್‌ ನಿಲ್ದಾಣದ ಆಸುಪಾಸಿನಲ್ಲಿವೆ. ಈ ಕಾಲೇಜುಗಳಲ್ಲಿ ಅಧ್ಯಯನ ಮಾಡುವ ಸಾವಿರಾರು ವಿದ್ಯಾರ್ಥಿಗಳಲ್ಲಿ ಬಹತೇಕರು ತುಂಗು ದಾಣದಲ್ಲಿ ಲಭ್ಯವಿರುವ ಇಟರ್‌ನೆಟ್‌ ಬಳಕೆ ಮಾಡುತ್ತಿದ್ದಾರೆ.ಮೊಬೈಲ್‌ ಚಾರ್ಜರ್‌ ಲಭ್ಯ: ತಂಗುದಾಣದಲ್ಲಿ ಕೇವಲ ವೈ ಫೈ ಇಂಟರ್‌ನೆಟ್‌ ಸೌಲಭ್ಯ ಮಾತ್ರವಲ್ಲದೆ ಮೊಬೈಲ್‌ಗಳನ್ನು ಚಾರ್ಜ್‌ ಮಾಡಿ ಕೊಳ್ಳುವ ವ್ಯವಸ್ಥೆಯೂ ಇದೆ.ಯಾವುದೇ ಕಂಪೆನಿಯ ಮೊಬೈಲ್‌ ಗಳಿರಲಿ ಅವುಗಳಿಗೆ ಅನ್ವಯವಾಗುವ ಚಾರ್ಜ್‌ಗಳು ಇಲ್ಲಿ ಲಭ್ಯವಿದ್ದು, ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳು ತ್ತಲೆ ಇಂಟರ್‌ನೆಟ್‌ ಬ್ರೌಸ್ ಮಾಡಬಹುದಾಗಿದೆ.ನಿಲುಗಡೆಯಾಗದ ಬಸ್‌ಗಳು: ನೂತನವಾಗಿ ನಿರ್ಮಾಣವಾಗಿರುವ ವ್ಯವಸ್ಥಿತಿ ಬಸ್‌ ತಂಗುದಾಣದಲ್ಲಿ ಬಸ್‌ಗಳು ನಿಲ್ಲುತ್ತಿಲ್ಲ. ಈ ಮೊದಲು ನಿಲ್ಲುತ್ತಿದ್ದ ವಿಜಯನಗರ ಕಾಲೇಜು ಎದುರಿನ ದಾರಿ ಮಧ್ಯೆದಲ್ಲಿಯೆ ಬಸ್‌ಗಳು ನಿಲ್ಲುತ್ತಿದ್ದು, ಇದರಿಂದಾಗಿ ತಂಗುದಾಣ ಪ್ರಯಾಣಿಕರಿಗೆ ಅನು ಕೂಲವಾಗದೆ ಇಂಟರ್‌ನೆಟ್‌ ಬ್ರೌಸ್‌ ಮಾಡುವ ಹುಡುಗರಿಗೆ ಮಾತ್ರ ಬಳಕೆಯಾಗುತ್ತಿದೆ.ಪ್ರಯಾಣಿಕರಿಗೆ ಅನುಕೂಲವಾಗುವ ಉದ್ದೇಶದಿಂದ ದಾನಿಗಳು ನಿರ್ಮಿಸಿದ ಈ ಬಸ್‌ ನಿಲ್ದಾಣ ಸದ್ಬಳಕೆಯಾಗ ಬೇಕಾದರೆ, ಮೊದಲು ಬಸ್‌ಗಳು ಅಲ್ಲಿ ನಿಲುಗಡೆಯಾಗಬೇಕು. ಈ ಕುರಿತು ಅಧಿಕಾರಿಗಳು ಇಲ್ಲಿ ಬಸ್‌ ನಿಲ್ಲಿಸುವ ವ್ಯವಸ್ಥೆ ಮಾಡಬೇಕು ಎಂದು ಸಾರ್ವ ಜನಿಕರು ಆಗ್ರಹಿಸುತ್ತಾರೆ.‘ಎಚ್‌ಎಂಎಚ್‌ ಕುಟುಂಬದವರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸುಸಜ್ಜಿತ ಬಸ್‌ ತಂಗುದಾಣ ನಿರ್ಮಿಸಿದ್ದಾರೆ. ಇದರ ಉದ್ದೇಶ ಈಡೇರಬೇಕು. ತಂಗುದಾಣಕ್ಕೆ ಬರುವ ಪ್ರಯಾಣಿಕರು ಇಲ್ಲಿ ಲಭ್ಯವಿರುವ ಇಂಟರ್‌ನೆಟ್‌ ಸೌಲಭ್ಯವನ್ನು ಉಪಯೋಗಿಸಬೇಕೆ ಹೊರತು, ಅದಕ್ಕಾಗಿಯೆ ತಂಗುದಾಣ ದಲ್ಲಿ ಕುಳಿತುಕೊಳ್ಳುವ ಪರಿಪಾಠ ತಪ್ಪಬೇಕು. ಅಲ್ಲದೆ ತಂಗುದಾಣದಲ್ಲಿ ಬಸ್‌ ನಿಲುಗಡೆಗೆ ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ವಿಜಯನಗರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.