ನವದೆಹಲಿ: ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುವ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ವೇತನವನ್ನು ಭಾರತ ಕ್ರಿಕೆಟ್ ಮಂಡಳಿಯು(ಬಿಸಿಸಿಐ) ಏರಿಕೆ ಮಾಡಿದೆ.

ಭಾರತ ಮಹಿಳಾ ತಂಡವು ಚೊಚ್ಚಲ ವಿಶ್ವಕಪ್ ಗೆದ್ದ ಕೆಲವು ತಿಂಗಳ ನಂತರ, ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.

ರಾಷ್ಟ್ರೀಯ ಮಟ್ಟದ ಏಕದಿನ ಹಾಗೂ ಟೆಸ್ಟ್ ಟೂರ್ನಿಯಲ್ಲಿ ಭಾಗವಹಿಸುವ ಅಂತರರಾಷ್ಟ್ರೀಯ ಆಟಗಾರ್ತಿಯರಿಗೆ ದಿನಕ್ಕೆ ₹50 ಸಾವಿರ ಹಾಗೂ ಮೀಸಲು ಆಟಗಾರ್ತಿಯರಿಗೆ ದಿನಕ್ಕೆ ₹25 ಸಾವಿರ ನೀಡಲಾಗುತ್ತದೆ. ದೇಶಿ ಟಿ-20 ಟೂರ್ನಿಯಲ್ಲಿ ಭಾಗವಹಿಸುವ ಆಟಗಾರ್ತಿಯರಿಗೆ ಪಂದ್ಯಕ್ಕೆ ₹25 ಸಾವಿರ ಹಾಗೂ ಮೀಸಲು ಆಟಗಾರ್ತಿಯರಿಗೆ ₹12,500 ವೇತನ ನೀಡಲಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ.

ಈ ಹಿಂದೆ ಅವರಿಗೆ ದಿನಕ್ಕೆ ₹20 ಸಾವಿರ ಹಾಗೂ ಮೀಸಲು ಆಟಗಾರ್ತಿಯರಿಗೆ ದಿನಕ್ಕೆ ₹10 ಸಾವಿರ ಸಂಭಾವನೆ ನೀಡಲಾಗುತ್ತಿತ್ತು.

19 ಹಾಗೂ 23 ವರ್ಷದ ಒಳಗಿನ ಜೂನಿಯರ್ ಮಹಿಳಾ ಕ್ರಿಕೆಟಿಗರ ವೇತನವನ್ನು ಕೂಡ ಹೆಚ್ಚು ಮಾಡಲಾಗಿದೆ. ಅವರು ಪಂದ್ಯಕ್ಕೆ ₹25 ಸಾವಿರ ಪಡೆದರೆ, ಮೀಸಲು ಆಟಗಾರ್ತಿಯರಿಗೆ ₹12,500 ವೇತನ ನೀಡಲಾಗುತ್ತದೆ ಎಂದು ಹೇಳಿದೆ.

ಎಲ್ಲಾ ಮಾದರಿಯ ದೇಶಿ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರ್ತಿಯರು ವಾರ್ಷಿಕ ₹12 ಲಕ್ಷದಿಂದ ₹14 ಲಕ್ಷದವರೆಗೆ ಗಳಿಸಬಹುದು ಎಂದು ಬಿಸಿಸಿಐ ಮಾಹಿತಿ ನೀಡಿದೆ.

ದೇಶಿ ಟೂರ್ನಿಯ ವೇಳೆ ಅಂಪೈರ್ ಹಾಗೂ ಮ್ಯಾಚ್ ರೆಫ್ರಿಗಳ ವೇತನವನ್ನು ಕೂಡ ಹೆಚ್ಚು ಮಾಡಲಾಗಿದೆ. ದೇಶಿ ಟೂರ್ನಿಯ ಲೀಗ್ ಪಂದ್ಯಗಳಿಗೆ ₹40 ಸಾವಿರ ಹಾಗೂ ನಾಕ್ ಔಟ್ ಪಂದ್ಯಗಳಿಗೆ ₹50 ಸಾವಿರದಿಂದ ₹60 ಸಾವಿರ ನೀಡಲಾಗುತ್ತದೆ ಎಂದು ಹೇಳಿದೆ.

ಬಿಸಿಸಿಐ ಹೊಸ ವೇತನ ನೀತಿಯ ಅನ್ವಯ, ರಣಜಿ ಟ್ರೋಫಿಯಲ್ಲಿನ ಅಂಪೈರ್ಗಳು ಲೀಗ್ ಪಂದ್ಯಕ್ಕೆ ₹1.60 ಲಕ್ಷ ಪಡೆಯಲಿದ್ದಾರೆ. ನಾಕ್ ಔಟ್ ಪಂದ್ಯಗಳಿಗೆ ₹2.5 ಲಕ್ಷದಿಂದ ₹3 ಲಕ್ಷದವರೆಗೆ ವೇತನ ಪಡೆಯಲಿದ್ದಾರೆ.

ಮಹಿಳಾ ಕ್ರಿಕೆಟ್ ಹಾಗೂ ದೇಶಿ ಟೂರ್ನಿಯ ಬೆಳವಣಿಗೆಯ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.