ಸೋಮವಾರ, ಏಪ್ರಿಲ್ 19, 2021
24 °C

ಇಂಟರ್‌ಸಿಟಿ ರೈಲಿನಲ್ಲಿ ಅನಾಥ ಮಗು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಇಲ್ಲಿಯ ರೈಲ್ವೆ ನಿಲ್ದಾಣಕ್ಕೆ ಸೋಮವಾರ ರಾತ್ರಿ ಆಗಮಿಸಿದ ಬೆಂಗ ಳೂರು-ಧಾರವಾಡ ಇಂಟರ್‌ಸಿಟಿ ರೈಲಿನಲ್ಲಿ ಸುಮಾರು ಮೂರು ವರ್ಷದ ಗಂಡುಮಗುವನ್ನು ಪೋಷ ಕರು ಬಿಟ್ಟು ಹೋದ ಘಟನೆ ನಡೆದಿದ್ದು, ರೈಲ್ವೆ ಪೊಲೀಸರು ಮಗುವನ್ನು ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.ಮಗುವಿಗೆ ತಲೆಯಲ್ಲಿ ಗಾಯ ವಾಗಿದ್ದು, ಸೊಂಟದ ಕೆಳಭಾಗವೂ ಸ್ವಾಧೀನ ಕಳೆದು ಕೊಂಡಿದ್ದರಿಂದ ನಡೆ ಯಲು ಸಾಧ್ಯವಾಗುವುದಿಲ್ಲ. ಮುಖ ವನ್ನೂ ಅತ್ತಿತ್ತ ತಿರುಗಿ ಸುವುದು ಸಾಧ್ಯವಾಗುವುದಿಲ್ಲ. ಇದನ್ನು ಅರಿತೇ ಯಾರೋ ಬಡ ಪೋಷಕರು ಮಗುವನ್ನು ರೈಲಿನಲ್ಲಿ ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದೆ.ವಿಷಯ ತಿಳಿದ ಬಳಿಕ ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ್ದ ಮಕ್ಕಳ ಸಹಾಯವಾಣಿಯ ಕಾರ್ಯಕರ್ತೆಯರು ಮಗು ವಿಗೆ ಚಿಕಿತ್ಸೆ ಕೊಡಿಸಿದ ಬಳಿಕ ಬಾಲಮಂದಿರಕ್ಕೆ ಆರೈಕೆಗೆ ಕರೆದೊಯ್ದರು. ವಾರಸುದಾರರು ರೈಲ್ವೆ ಪೊಲೀಸ ರನ್ನು ಸಂಪರ್ಕಿಸಬಹುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.