ಮಂಗಳವಾರ, ಜೂನ್ 15, 2021
27 °C

ಇಂಥ ಹುಟ್ಟು ಹಬ್ಬಬೇಕಿತ್ತೇ?

ಕೆ. ಜಿ. ಭದ್ರಣ್ಣವರ, ಮುದ್ದೇಬಿಹಾಳ Updated:

ಅಕ್ಷರ ಗಾತ್ರ : | |

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಹುಟ್ಟು ಹಬ್ಬ ಆಚರಿಸಲಾಯಿತು. ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಹೊರಗಿನಿಂದ ಕರೆತಂದಿದ್ದರು. ಬೃಹತ್ ಪೆಂಡಾಲ್, ವಿಶಾಲ ವೇದಿಕೆ, ಭರ್ಜರಿ ಹಾರ - ತುರಾಯಿಗಳು, ಆಸನಗಳು, ಊಟದ ವ್ಯವಸ್ಥೆ ಇತ್ಯಾದಿಗಳನ್ನು ಗಮನಿಸಿದರೆ ಸಮಾರಂಭಕ್ಕೆ ಭಾರೀ ಹಣ ಖರ್ಚಾಗಿದೆ.ಈ ಹಣ ಎಲ್ಲಿಂದ ಬಂತು? ಯಡಿಯೂರಪ್ಪ ಅಭಿಮಾನಿಗಳು ಸಂಗ್ರಹಿಸಿದ್ದಾದರೆ ಅವರಿಗೆ ಇಷ್ಟೊಂದು ಹಣ ಕೊಟ್ಟವರು ಯಾರು? ಇಂತಹ ನಿರುಪಯುಕ್ತ ಸಮಾರಂಭಗಳಿಗೆ ಭಾರೀ ಹಣ ಖರ್ಚು ಮಾಡುವುದು ನ್ಯಾಯವೇ? ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಬಹುದಿತ್ತಲ್ಲವೇ?

 

ಸಮಾರಂಭದಲ್ಲಿ ರಾಜಕೀಯ ಮಾತನಾಡಿದ ಯಡಿಯೂರಪ್ಪ ಮುಖ್ಯಮಂತ್ರಿ ಸದಾನಂದ ಗೌಡರ ಬಗ್ಗೆ ಇರುವ ಅಸಹನೆಯನ್ನು ಕಾರಿಕೊಂಡರು. ರಾಜ್ಯದ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಲ್ಲ. ಜನರು ಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ದುಂದು ವೆಚ್ಚದ ಹುಟ್ಟು ಹಬ್ಬ ಬೇಕಿತ್ತೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.