ಬಹುನಿರೀಕ್ಷಿತ ಸಿಎಂಆರ್ ನ್ಯಾಷನಲ್ ಲಾ ಫೆಸ್ಟ್ `ದಿ ಸಿಎಂಆರ್ ನ್ಯಾಷನಲ್ ಮೂಟ್ ಕೋರ್ಟ್ ಕಾಂಪಿಟೇಷನ್~ ಇಂದಿನಿಂದ (ಶುಕ್ರವಾರ) ಭಾನುವಾರದವರೆಗೆ ನಡೆಯಲಿದೆ. ಇದು ಸಿಎಂಆರ್ ಸ್ಪರ್ಧೆಯ ಮೂರನೇ ಆವೃತ್ತಿ.

ಈ ಸ್ಪರ್ಧೆಯಲ್ಲಿ ನ್ಯಾಷನಲ್ ಲಾ ಸ್ಕೂಲ್ ಸೇರಿದಂತೆ ದೇಶದ ಇತರೆ ಪ್ರತಿಷ್ಟಿತ ಕಾನೂನು ಕಾಲೇಜುಗಳ 75ಕ್ಕೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಈ ಹಿಂದಿನ ಎರಡು ಆವೃತ್ತಿಗಳನ್ನು 2007 ಮತ್ತು 2010ರಲ್ಲಿ ಸಿಎಂಆರ್ ನ್ಯಾಷನಲ್ ಕ್ರಾಸ್ ಎಕ್ಸಾಮಿನೇಷನ್ ಕಾಂಪಿಟೇಷನ್ 2011ನೊಂದಿಗೆ ಆಯೋಜಿಸಲಾಗಿತ್ತು.

ಇವುಗಳು ಅಪಾರ ಯಶಸ್ವಿಯಾದ ನಂತರ ಇಲ್ಲಿನ ಆತಿಥ್ಯ ಮತ್ತು ಸ್ಪರ್ಧೆಯ ಗುಣಮಟ್ಟದ ಬಗ್ಗೆ ಅಪಾರ ಪ್ರಶಂಸೆ ಕೇಳಿಬಂದಿತ್ತು. ಇದರಿಂದಾಗಿ ಅಣಕು ನ್ಯಾಯಾಲಯ ಸ್ಪರ್ಧೆಗಳ ಪೈಕಿ ಸಿಎಂಆರ್ ನ್ಯಾಷನಲ್ ಮೂಟ್ ಕೋರ್ಟ್ ಕಾಂಪಿಟೇಷನ್ ಬಹುನಿರೀಕ್ಷಿತ ಸ್ಪರ್ಧೆಗಳಲ್ಲಿ ಒಂದಾಗಿದೆ.

ಸಿಎಂಆರ್ ನ್ಯಾಷನಲ್ ಮೂಟ್ ಕೋರ್ಟ್ ಕಾಂಪಿಟೇಷನ್ ಮಹಿಳೆಯರ ಸ್ವತಂತ್ರ ಮತ್ತು ಚಲನಶೀಲ ಮನೋಭಾವ ತಿಳಿಸಿಕೊಡುವುದಷ್ಟೇ ಅಲ್ಲದೇ ಆಕೆಯ ಮೇಲಿನ ದೌರ್ಜನ್ಯ ತಡೆಯಲು ಮತ್ತು ತೊಂದರೆ ಅರಿತುಕೊಳ್ಳಲು ವೇದಿಕೆ ಸೃಷ್ಟಿಸುತ್ತಿದೆ. ಪ್ರಸ್ತುತ ಆವೃತ್ತಿಯಲ್ಲಿ 2005ರ ಕೌಟುಂಬಿಕ ಹಿಂಸೆಯಿಂದ ಮಹಿಳೆಯ ರಕ್ಷಣೆ ಕಾನೂನು ಕುರಿತು ಜಾಗೃತಿ ಮೂಡಿಸುವತ್ತ ಗಮನ ಕೇಂದ್ರೀಕರಿಸಲಾಗುತ್ತಿದೆ.

`ಇದು ನಮ್ಮ ಸಂಸ್ಥೆಯ ಅತ್ಯಂತ ಪ್ರಮುಖ ಸ್ಪರ್ಧೆ. ಈ ಹಿಂದಿನ ಆವೃತ್ತಿಗಳಲ್ಲಿ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಸಿರಿಯಾ ಜೋಸೆಫ್, ಸುಪ್ರಿಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ಹಾಗೂ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ವೆಂಕಟಾಚಲ ಅವರು ಹಾಜರಾಗಿ ಸ್ಪರ್ಧೆಗೆ ಪ್ರೋತ್ಸಾಹ ನೀಡಿದ್ದರು.

ಎರಡು ವರ್ಷಕ್ಕೊಮ್ಮೆ ನಡೆಯುವ ಈ ಸ್ಪರ್ಧೆ ಗುಣಮಟ್ಟದ ಶಿಕ್ಷಣದ ಅಗತ್ಯದ ಕಡೆಗೆ ಗಮನಹರಿಸುತ್ತಿದೆ. ಸ್ಪರ್ಧೆಯಲ್ಲಿ ರೂ.50 ಸಾವಿರ ನಗದು ಬಹುಮಾನವಿರುವುದಲ್ಲದೆ ಸ್ಪರ್ಧಿಗಳ ಕಾನೂನು ಜ್ಞಾನ ಮತ್ತು ಶೈಲಿ ಒರೆಗೆ ಹಚ್ಚಲ್ಪಡುತ್ತದೆ~ ಎಂದರು ಸಿಎಂಆರ್ ಸಂಸ್ಥೆ ಸಮೂಹದ ಅಧ್ಯಕ್ಷೆ ಡಾ. ಸಬೀತಾ ಕೃಷ್ಣಮೂರ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.