ಬೆಂಗಳೂರು: ಕಾಶೀ ಮಹಾಪೀಠದ ಜಗದ್ಗುರು ವಿಶ್ವಾರಾಧ್ಯ ಜಯಂತ್ಯೋತ್ಸವದ ಅಂಗವಾಗಿ ಕಾಶಿ ಮಹಾಪೀಠದ ಶೈವಭಾರತಿ ಪ್ರತಿಷ್ಠಾನ, ಕಾಶಿ ಹಿಂದೂ ವಿಶ್ವವಿದ್ಯಾಲಯ ಮತ್ತು ಪಾಂಡಿಚೇರಿ ಫ್ರೆಂಚ್ ಶೋಧ ಸಂಸ್ಥಾನಗಳ ಸಹಯೋಗದಲ್ಲಿ ಇದೇ 27 ರಿಂದ ಮಾರ್ಚ್ 1 ರವರೆಗೆ ‘ಶೈವಾಗಮಗಳ ಅಂತರರಾಷ್ಟ್ರೀಯ ಶಾಸ್ತ್ರ ಸಂಗೋಷ್ಠಿಯನ್ನು’ ಕಾಶಿ ಹಿಂದೂ ವಿಶ್ವವಿದ್ಯಾಲಯದ ಧರ್ಮಾಗಮದಲ್ಲಿ ಆಯೋಜಿಸಿದೆ.

ಮೂರು ದಿನಗಳ ಕಾಲ ನಡೆಯುವ ಅಂತರರಾಷ್ಟ್ರೀಯ ಶಾಸ್ತ್ರ ಗೋಷ್ಠಿಯಲ್ಲಿ ಮೂರು ಶಾಖೆಗಳ ದೇಶ ಮತ್ತು ವಿದೇಶಗಳ ವಿದ್ವಾಂಸರು ವಿವಿಧ ವಿಷಯಗಳ ಮೇಲೆ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

ಕಾರ್ಯಕ್ರಮವನ್ನು ಕಾಶೀಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಲಿದ್ದು, ಕಾವ್ಯಶಾಸ್ತ್ರ, ವ್ಯಾಕರಣ ಶಾಸ್ತ್ರ, ಭಾಷಾವಿಜ್ಞಾನ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.