ಇಂದಿನಿಂದ ಸಾರ್ಕ್ ಶೃಂಗಸಭೆ

7

ಇಂದಿನಿಂದ ಸಾರ್ಕ್ ಶೃಂಗಸಭೆ

Published:
Updated:

ಥಿಂಪು (ಪಿಟಿಐ): ದಕ್ಷಿಣ ಏಷ್ಯಾದ ಎಂಟು ರಾಷ್ಟ್ರಗಳು ಭಾಗವಹಿಸುವ ಸಾರ್ಕ್ ಶೃಂಗಸಭೆ ಭಾನುವಾರದಿಂದ ನಾಲ್ಕು ದಿನಗಳ ಕಾಲ ಇಲ್ಲಿ ನಡೆಯಲಿದ್ದು, ವೀಸಾ ನಿಯಮಗಳ ಸಡಿಲಿಕೆ,  ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಪರಸ್ಪರ ಸಹಕರಿಸುವುದೂ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.ಆರಂಭದ ಎರಡು ದಿನ ಸಾರ್ಕ್ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳು, ಭದ್ರತೆಯಲ್ಲಿ ಸಹಕಾರ, ಆರ್ಥಿಕ ಒಪ್ಪಂದ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ.ಇವರು ಈ ಸಂಬಂಧ ಅಂತಿಮ ವರದಿಯೊಂದನ್ನು ತಯಾರಿಸಲಿದ್ದು, ಫೆಬ್ರುವರಿ 8 ಮತ್ತು 9ರಂದು ನಡೆಯಲಿರುವ ಸಭೆಯಲ್ಲಿ ಸಾರ್ಕ್ ರಾಷ್ಟ್ರಗಳ ವಿದೇಶಾಂಗ ಸಚಿವರು ಈ ವರದಿಯನ್ನು ಪರಿಗಣಿಸಲಿದ್ದಾರೆ.

ಭಾರತ-ಪಾಕ್ ಮಾತುಕತೆ

  ದ್ವಿಪಕ್ಷೀಯ ಮಾತುಕತೆ ಪ್ರಕ್ರಿಯೆಗೆ ಮರಳಿ ಚಾಲನೆ ನೀಡುವ ಯತ್ನವಾಗಿ ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಗಳು ಮಾತುಕತೆ ನಡೆಸಲಿದ್ದಾರೆ.ಭಾನುವಾರ ಆರಂಭವಾಗಲಿರುವ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸಲು ಇಲ್ಲಿಗ ಆಗಮಿಸಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಮತ್ತು ಪಾಕ್ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ಮಾತುಕತೆ ನಡೆಸಲಿದ್ದಾರೆ. ಕಳೆದ ಜುಲೈನಲ್ಲಿ ಪಾಕಿಸ್ತಾನದಲ್ಲಿ ನಡೆದ ವಿದೇಶಾಂಗ ವ್ಯವಹಾರಗಳ ಸಚಿವರ ಮಾತುಕತೆ ವಿಫಲವಾದ ನಂತರ ಮೊದಲ ಬಾರಿಗೆ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗೆ ಚಾಲನೆ ದೊರೆತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry