ಬುಧವಾರ, ಮೇ 12, 2021
22 °C

ಇಂದು ಎಐ-ಎಸ್‌ಬಿಎಚ್ ಫೈನಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಏರ್ ಇಂಡಿಯಾ  (ಎಐ) ತಂಡದವರು ಗುರುವಾರ ಇಲ್ಲಿ ನಡೆಯಲಿರುವ ಬಿಸಿಸಿಐ ಕಾರ್ಪೊರೇಟ್ ಟ್ರೋಫಿ  ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (ಎಸ್‌ಬಿಎಚ್) ತಂಡವನ್ನು ಎದುರಿಸಲಿದ್ದಾರೆ.ಈ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ನಿಯೋ ಕ್ರಿಕೆಟ್‌ನಲ್ಲಿ ನೇರ ಪ್ರಸಾರವಾಗಲಿದೆ. ಈ ಪಂದ್ಯ ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ.ಏರ್ ಇಂಡಿಯಾದ ಪಾಲ್ ವಲ್ತಾಟಿ, ರಾಬಿನ್ ಉತ್ತಪ್ಪ, ನಾಯಕ ಹೃಷಿಕೇಶ್ ಕಾನಿಟ್ಕರ್ ಹಾಗೂ ಮೊಹಮ್ಮದ್ ಕೈಫ್ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳು. ಹಾಗೇ, ಬೌಲಿಂಗ್‌ನಲ್ಲಿ ವೇಗಿ ಪ್ರದೀಪ್ ಸಾಂಗ್ವಾನ್ ಪರಿಣಾಮಕಾರಿ ದಾಳಿ ನಡೆಸುತ್ತಿದ್ದಾರೆ.ಹೈದರಾಬಾದ್ ತಂಡದಲ್ಲಿ ಟಿ.ಸುಮನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಸೆಮಿಫೈನಲ್‌ನಲ್ಲಿಶತಕ ಗಳಿಸಿದ್ದ ಅವರು ಬೌಲಿಂಗ್‌ನಲ್ಲಿ ಮೂರು ವಿಕೆಟ್ ಪಡೆದು ಗಮನ ಸೆಳೆದಿದ್ದರು.ಏರ್ ಇಂಡಿಯಾ ಸೆಮಿಫೈನಲ್ ಪಂದ್ಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ತಂಡವನ್ನು ಸೋಲಿಸಿತ್ತು. ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ತಂಡ ಮತ್ತೊಂದು ಸೆಮಿಫೈನಲ್‌ನಲ್ಲಿ ಸಿಎಜಿ ಎದುರು ಗೆಲುವು ಸಾಧಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.