ಸೋಮವಾರ, ಏಪ್ರಿಲ್ 19, 2021
26 °C

ಇಂದು ಕಸಾಪ ಮಹಿಳಾ ಘಟಕದ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ:  ಪಟ್ಟಣದ ಅಶೋಕ್ ನಗರದಲ್ಲಿನ  ಪ್ರೇಮಾ ಹೂಗಾರ್ ಅವರ ಮನೆಯಲ್ಲಿ ನ.17(ಶನಿವಾರ), ಸಂಜೆ 6 ಗಂಟೆಗೆ `ವಿಜಯಪುರ ಕಸಾಪ ಮಹಿಳಾ ಘಟಕ ಉದ್ಘಾಟನೆ~ ಸಮಾರಂಭ ನಡೆಯಲಿದೆ ಎಂದು ಟೌನ್ ಕಸಾಪ ಘಟಕದ ಅಧ್ಯಕ್ಷ ಜೆ.ಆರ್. ಮುನಿವೀರಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಿಜಯಪುರ ಪುರಸಭಾ ಸದಸ್ಯರಾದ ಭಾರತಿ ರಾಜಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಹೂಗಾರ್ ಅಧ್ಯಕ್ಷತೆ ವಹಿಸುವರು. ತಾಲ್ಲೂಕು ಕಸಾಪ ಅಧ್ಯಕ್ಷ ಎನ್. ರಾಜಗೋಪಾಲ್, ಬೆಂ.ಗ್ರಾ. ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಚಿ.ಮಾ. ಸುಧಾಕರ್, ಟೌನ್ ಘಟಕದ ಗೌರವಾಧ್ಯಕ್ಷ ಎನ್. ಜಯರಾಂ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.