ಸೋಮವಾರ, ಮೇ 17, 2021
23 °C

ಇಂದು ನೀರಿನ ಅದಾಲತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಜಲ ಮಂಡಳಿಯ ನೀರಿನ ಅದಾಲತ್ ಅಲಸೂರು, ಕೆ.ಆರ್.ಪುರಂ, ಹಂಪಿನಗರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಮಂಗಳವಾರ ಬೆಳಿಗ್ಗೆ 9.30ರಿಂದ 11ರ ವರೆಗೆ ನಡೆಯಲಿದೆ.

ನೀರಿನ ಬಿಲ್, ನೀರು ಮತ್ತು ಒಳಚರಂಡಿ ಸಂಪರ್ಕ ನೀಡುವಲ್ಲಿ ವಿಳಂಬ, ಗೃಹೇತರದಿಂದ ಗೃಹ ಬಳಕೆ ಸಂಪರ್ಕಕ್ಕೆ ಪರಿವರ್ತನೆ ಮಂಜೂರಾತಿಯಲ್ಲಿ ವಿಳಂಬ, ನೀರು ಮತ್ತು ಒಳಚರಂಡಿಗೆ ಸಂಬಂಧಿಸಿದ ಎಲ್ಲ ವಿವಾದಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗುವುದು.

ಅಲಸೂರಿನಲ್ಲಿ ನಡೆಯುವ ದಕ್ಷಿಣ- ಪೂರ್ವ 1ನೇ ವಿಭಾಗದ ಅದಾಲತ್‌ನಲ್ಲಿ ದೊಮ್ಮಲೂರು, ಜಾನ್ಸನ್ ಮಾರ್ಕೆಟ್, ಸಿ.ಎಲ್.ಆರ್. ಸೇವಾ ಠಾಣೆ ವ್ಯಾಪ್ತಿಯ ಗ್ರಾಹಕರು ಉಪಯೋಗ ಪಡೆಯಬಹುದು. ಸಂಪರ್ಕಕ್ಕೆ: 22945196, 22945159.

ಹಂಪಿನಗರದಲ್ಲಿ ನಡೆಯುವ ಪಶ್ಚಿಮ ಒಂದನೇ ಉಪವಿಭಾಗದ ಅದಾಲತ್‌ನಲ್ಲಿ ವಿಜಯನಗರ 1 ಮತ್ತು 2ನೇ ಹಂತ, ಹಂಪಿನಗರ, ಎಂ.ಸಿ. ಬಡಾವಣೆ, ಗೋವಿಂದರಾಜನಗರ, ಪ್ರಶಾಂತನಗರ, ಅತ್ತಿಗುಪ್ಪೆ, ಮಾರೇನಹಳ್ಳಿ, ಚಂದ್ರ ಲೇಔಟ್ ಸೇವಾ ವ್ಯಾಪ್ತಿಯ ಗ್ರಾಹಕರು ಉಪಯೋಗ ಪಡೆಯಬಹುದು. ಸಂಪರ್ಕಕ್ಕೆ: 22945171, 22945172.

ಕೆ.ಆರ್.ಪುರಂನಲ್ಲಿ ನಡೆಯುವ ಪೂರ್ವ 5ನೇ ಉಪವಿಭಾಗದ ಅದಾಲತ್‌ನಲ್ಲಿ ಸದಾನಂದ ನಗರ, ರಾಮಮೂರ್ತಿ ನಗರ, ಕೆ.ಆರ್. ಪುರಂ ಸೇವಾ ಠಾಣೆ ವ್ಯಾಪ್ತಿಯ ಗ್ರಾಹಕರು ಸದುಪಯೋಗ ಪಡೆಯಬಹುದು. ಸಂಪರ್ಕಕ್ಕೆ: 22945158, 25663688.

ಗ್ರಾಹಕರು ತಮ್ಮ ದೂರುಗಳ ಪರಿಹಾರಕ್ಕಾಗಿ ಕರೆ ಕೇಂದ್ರದ ದೂರು ಕೊಠಡಿಯನ್ನು (ದೂರವಾಣಿ ಸಂಖ್ಯೆ-22238888) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.