ಮಂಗಳವಾರ, ಏಪ್ರಿಲ್ 13, 2021
31 °C

ಇಂದು ಸಂಸತ್ ಸ್ಥಾಯಿ ಸಮಿತಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದು ಸಂಸತ್ ಸ್ಥಾಯಿ ಸಮಿತಿ ಸಭೆ

ನವದೆಹಲಿ: ಸಬ್ಸಿಡಿ ದರದ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆ ಮಿತಿಯನ್ನು ವರ್ಷಕ್ಕೆ 6ಕ್ಕೆ ನಿಗದಿಗೊಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಪೆಟ್ರೊಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯವು ಪ್ರಮಾದ ಎಸಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಸ್ಥಾಯಿ ಸಮಿತಿಯ ಸದಸ್ಯರಿಗೆ ಕ್ಷಮಾಪಣೆ ಪತ್ರವೊಂದನ್ನು ಬರೆದಿದೆ. ಮಂಗಳವಾರ ನಡೆಯಲಿರುವ ಪೆಟ್ರೊಲಿಯಂ ಹಾಗೂ ನೈಸರ್ಗಿಕ ಅನಿಲ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಪತ್ರದ ವಿಚಾರವೂ ಚರ್ಚೆಗೆ ಬರಲಿದೆ. ಮಂಗಳವಾರ ಸಭೆ ನಡೆಯವುದನ್ನು ಸಮಿತಿಯ ಅಧ್ಯಕ್ಷರೂ ಆದ ಕಾಂಗ್ರೆಸ್ ಸಂಸದ ವಿ. ಅರುಣ ಕುಮಾರ್ ಖಚಿತಪಡಿಸಿದ್ದಾರೆ.ಸಬ್ಸಿಡಿ ದರದ ಸಿಲಿಂಡರ್ ಮಿತಿಯನ್ನು ವರ್ಷಕ್ಕೆ 6ಕ್ಕೆ ನಿಗದಿಗೊಳಿಸಿ ಸಚಿವಾಲಯ ಇತ್ತೀಚೆಗೆ ಜಾಹೀರಾತು ಹೊರಡಿಸಿದ್ದು, ಇದು ಸ್ಥಾಯಿ ಸಮಿತಿ ಶಿಫಾರಸಿಗೆ ವ್ಯತಿರಿಕ್ತವಾಗಿತ್ತು.ಯಾಕಿ ಕ್ಷಮಾಪಣೆ ಪತ್ರ ?:  ವಾರ್ಷಿಕ ರೂಪಾಯಿ 6 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಆದಾಯ ಇರುವ ಕುಟುಂಬಗಳಿಗೆ ಮಾತ್ರ ಸಬ್ಸಿಡಿ ದರದ ಸಿಲಿಂಡರ್‌ಗಳನ್ನು ಮಿತಿಗೊಳಿಸಬೇಕು ಎಂದು ಸ್ಥಾಯಿ ಸಮಿತಿ ಸಲಹೆ ನೀಡಿತ್ತು. ಆದರೆ ಸರ್ಕಾರ ಇದನ್ನು ಸರಿಯಾಗಿ ಗಮನಿಸದೆ ಎಲ್‌ಪಿಜಿ ಹೊಂದಿರುವ ಎಲ್ಲ ವರ್ಗದವರಿಗೂ ಇದನ್ನು ಅನ್ವಯಿಸಿ ಜಾಹೀರಾತು ಹೊರಡಿಸಿ ಪ್ರಮಾದ ಎಸಗಿದೆ ಎಂದು ಸಮಿತಿಯ ಸದಸ್ಯರೂ ಆದ ಸಿಪಿಎಂ ಸಂಸದ ತಪನ್ ಸೇನ್ ತಿಳಿಸಿದ್ದಾರೆ.ಸಿಲಿಂಡರ್ ಮಿತಿಗೊಳಿಸುವ ಸರ್ಕಾರದ ಈ ನಿರ್ಧಾರ ವಿರೋಧ ಪಕ್ಷಗಳ ತೀವ್ರ ಟೀಕೆಗೆ ಅಷ್ಟೆ ಅಲ್ಲ, ಕಾಂಗ್ರೆಸ್ ಪಕ್ಷದ ಒಳಗಡೆಯೂ ಅಸಮಾಧಾನಕ್ಕೆ ಕಾರಣವಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.