ಭಾನುವಾರ, ಮಾರ್ಚ್ 7, 2021
20 °C

ಇಂದು ‘ವ್ಯೂಹ’ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದು ‘ವ್ಯೂಹ’ ಪ್ರದರ್ಶನ

ಶಶಿ ಕಲಾವಿದರು ಅರ್ಪಿಸುತ್ತಿರುವ ಹೊಸ ಪತ್ತೆದಾರಿ ನಾಟಕ ‘ವ್ಯೂಹ’, ಬುಧವಾರ (ಮೇ 21) ಸಂಜೆ 7ಕ್ಕೆ ಹನುಮಂತ ನಗರದಲ್ಲಿರುವ ಕೆ.ಎಚ್.ಕಲಾಸೌಧದಲ್ಲಿ ಪ್ರದರ್ಶನಗೊಳ್ಳಲಿದೆ. ಕಲಾವಿದ ಶ್ರೀನಾಥ್ ವಸಿಷ್ಠ ಅವರು ಈ ನಾಟಕದ ರಚನೆ ಮತ್ತು ನಿರ್ದೇಶನವನ್ನು ಮಾಡಿದ್ದಾರೆ.ಹಣದ ಆಮಿಷಕ್ಕೆ ಸಿಲುಕಿ, ಹೆತ್ತವರನ್ನು ಕಡೆಗಣಿಸಿ, ಅಪರಿಚಿತರಿಗೆ ಆಶ್ರಯ ಕೊಟ್ಟು, ಅವರು ಹಾಕುವ ತಾಳಕ್ಕೆ ಕುಣಿಯುವ ಒಬ್ಬ ಯುವಕನ ಸುತ್ತ ಹೆಣೆದಿರುವ ಕಥೆ ಇದು. ಮಗನ ಪ್ರತಿ ನಡವಳಿಕೆಗಳನ್ನು ವಿರೋಧಿಸುವ ತಂದೆ ಹಾಗೂ ಸೋದರ ಮಾವನ ಕೊಲೆಯಾಗುತ್ತದೆ. ಈ ಎರಡು ಕೊಲೆಗಳ ಸುತ್ತ ನಾಟಕ ಸಾಗುತ್ತದೆ, ಯಾರು ಕೊಲೆ ಮಾಡಿದರು? ಹೇಗೆ ಪತ್ತೆಯಾಯಿತು? ಎನ್ನುವ ಕುತೂಹಲ ಮೂಡಿಸುವ ಕಥಾ ಹಂದರವನ್ನು ವ್ಯೂಹ ಹೊಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.