ಶುಕ್ರವಾರ, ಜೂನ್ 25, 2021
29 °C

ಇಂದ್ರಾ ಸಂಬಳ ರೂ 113 ಕೋಟಿ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಇಲ್ಲಿಯ ಪೆಪ್ಸಿ ಕಂಪೆನಿಯ ಮುಖ್ಯಸ್ಥೆ ಭಾರತ ಮೂಲದ ಇಂದ್ರಾ ನೂಯಿ ಒಂದು ವರ್ಷ­ದಲ್ಲಿ ಪಡೆದ ಸಂಬಳ ಎಷ್ಟು ಗೊತ್ತೆ ?, ಬರೊಬ್ಬರಿ ರೂ 113 ಕೋಟಿ.2013ರಲ್ಲಿ ಇಂದ್ರಾ ಈ ದಾಖಲೆ ಸಂಬಳ ಪಡೆದಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಇದು ಶೇ 7ರಷ್ಟು ಹೆಚ್ಚಳವಾಗಿದೆ. ತಂಪು ಪಾನೀಯ ಉತ್ಪಾದನೆಯಲ್ಲಿ ವಿಶ್ವದಲ್ಲಿ ಹೆಸರು­ಮಾಡಿರುವ ಈ ಕಂಪೆನಿ, ಇಂದ್ರಾ ಅವರಿಗೆ ಸಂಬಳದ ಜತೆಗೆ ಅಸಾಮಾನ್ಯ ಸಾಧನೆಗಾಗಿ ವಿಶೇಷ ಪ್ರೋತ್ಸಾಹ ಧನ, ನಗದು ಬಹುಮಾನಗಳನ್ನೂ ನೀಡಿದೆ. 58 ವರ್ಷದ ಇಂದ್ರಾ ಕಳೆದ 2006 ರಿಂದ ಪೆಪ್ಸಿ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.