ಸೋಮವಾರ, ಜೂನ್ 21, 2021
27 °C

ಇನ್ನಷ್ಟು ಸಮಯ ಅಗತ್ಯ: ರೋಹನ್ ಬೋಪಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇನ್ನಷ್ಟು ಸಮಯ ಅಗತ್ಯ: ರೋಹನ್ ಬೋಪಣ್ಣ

ಬೆಂಗಳೂರು: ಮಹೇಶ್ ಭೂಪತಿ ಜೊತೆ ಪೂರ್ಣ ರೀತಿಯ ಹೊಂದಾಣಿಕೆಯೊಂದಿಗೆ ಆಡಲು ಇನ್ನೂ ಕೆಲವು ಕಾಲ ಅಗತ್ಯ ಎಂದು ಕೊಡಗಿನ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅಭಿಪ್ರಾಯಪಟ್ಟರು.ದುಬೈ ಓಪನ್ ಟೆನಿಸ್ ಟೂರ್ನಿಯಲ್ಲಿ ಭೂಪತಿ- ರೋಹನ್ ಜೋಡಿ ಪ್ರಶಸ್ತಿ ಜಯಿಸಿತ್ತು. `ನಮ್ಮಿಬ್ಬರ ನಡುವೆ ಹೊಂದಾಣಿಕೆ ಸಾಧ್ಯ ಎಂಬುದನ್ನು ಈ ಗೆಲುವು ತೋರಿಸಿಕೊಟ್ಟಿದೆ. ಆದರೆ ಪೂರ್ಣ ರೀತಿಯಲ್ಲಿ ಹೊಂದಾಣಿಕೆ ಆಗಲು ಇನ್ನೂ ಅಲ್ಪ ಸಮಯ ಬೇಕು~ ಎಂದು ಮಂಗಳವಾರ ಕೆಎಸ್‌ಎಲ್‌ಟಿಎನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.ಲಂಡನ್ ಒಲಿಂಪಿಕ್‌ನಲ್ಲಿ ದೇಶಕ್ಕೆ ಪದಕ ಗೆದ್ದುಕೊಡಬೇಕೆಂಬ ಉದ್ದೇಶದಿಂದ ರೋಹನ್ ಈ ಋತುವಿನ ಆರಂಭದಿಂದ ಭೂಪತಿ ಜೊತೆ ಆಡುತ್ತಿದ್ದಾರೆ. ಇದಕ್ಕಾಗಿ ಅವರು ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಷಿ ಅವರೊಂದಿಗಿನ `ಜೊತೆಯಾಟ~ಕ್ಕೆ ತೆರೆ ಎಳೆದಿದ್ದರು.`ದುಬೈ ಓಪನ್‌ನಲ್ಲಿ ಲಭಿಸಿದ ಗೆಲುವು ಅದ್ಭುತ ಅನುಭವ. ಅಲ್ಲಿ ನಮಗೆ ಪ್ರೇಕ್ಷಕರಿಂದ ಉತ್ತಮ ಬೆಂಬಲ ದೊರೆಯಿತು~ ಎಂದು ರೋಹನ್ ತಿಳಿಸಿದರು. ಈ ಟೂರ್ನಿಯ ಫೈನಲ್‌ನಲ್ಲಿ ಭಾರತದ ಜೋಡಿ ಪೋಲೆಂಡ್‌ನ ಮರಿಯುಸ್ ಫ್ರೈಸ್ಟೆನ್‌ಬರ್ಗ್ ಮತ್ತು ಮಾರ್ಸಿನ್ ಮಟೋವ್‌ಸ್ಕಿ ಎದುರು ಜಯ ಸಾಧಿಸಿತ್ತು.ಭೂಪತಿ ಹೊಂದಿರುವ ಅಪಾರ ಅನುಭವ ನನ್ನ ನೆರವಿಗೆ ಬರುತ್ತಿದೆ ಎಂದ ರೋಹನ್, `17 ವರ್ಷಗಳ ಅನುಭವವನ್ನು ಭೂಪತಿ ಹೊಂದಿದ್ದಾರೆ. ಅದೇ ರೀತಿ ಹಲವು ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಆಡುವುದು ಸುಲಭ~ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.