ಇನ್ಫೆಂಟ್ ತೆರೇಸಾ ಇನ್ನಿಲ್ಲ
ಕೊಚ್ಚಿ (ಪಿಟಿಐ): ರಕ್ಷಣಾ ಸಚಿವ ಎ.ಕೆ.ಅಂಟನಿ ಅವರ ಅಕ್ಕ ಕ್ರೈಸ್ತ ಸನ್ಯಾಸಿನಿ ಇನ್ಫೆಂಟ್ ತೆರೇಸಾ(80) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.
ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಜುಲೈ 2 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚೀನಾ ಪ್ರವಾಸದಲ್ಲಿರುವ ಎ.ಕೆ.ಅಂಟನಿ ಅವರು ವಾಪಸಾದ ನಂತರ ಅಳಪುಜ ಜಿಲ್ಲೆಯ ಚೇರ್ತಲಾದ ಕನ್ನುಪುರಂ ಪುತ್ತನಪಲ್ಲಿ ಎಂಬಲ್ಲಿ ಸೋಮವಾರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಇನ್ಫೆಂಟ್ ತೆರೇಸಾ ಚೇರ್ತಲಾ ಸಮೀಪದ ಪತ್ತನಕಾಡ್ನ ಸಂತ ಜೋಸೆಫ್ ಕಾನ್ವೆಂಟ್ನ ಹಿರಿಯ ಸನ್ಯಾಸಿನಿಯಾಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.