ಸೋಮವಾರ, ಜೂನ್ 14, 2021
26 °C

ಇನ್‌ಸ್ಪೆಕ್ಟರ್‌ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳ್ಳನಿಂದ ವಶಪಡಿಸಿ­ಕೊಂಡ ಹಣವನ್ನು ವಾರಸುದಾರರಿಗೆ ನೀಡದೆ ವಂಚಿಸಿದ ಆರೋಪದ ಮೇಲೆ ರಾಜ­ಗೋಪಾಲನಗರ ಠಾಣೆಯ ಇನ್‌ಸ್ಪೆಕ್ಟರ್‌ ಎಂ.ಕೆ.ಗಣಪತಿ ಅವರನ್ನು ಅಮಾನತು ಮಾಡಿ ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ಆದೇಶ ಹೊರಡಿಸಿದ್ದಾರೆ.ಸ್ನೇಹಿತನ ಮನೆಯಲ್ಲಿ ₨ 1 ಕೋಟಿ ರೂಪಾಯಿ ಹಣ ಕಳವಾಗಿದೆ ಎಂದು 2013ರ ಅಕ್ಟೋಬರ್‌ನಲ್ಲಿ ಉದ್ಯಮಿ ರಂಗಸ್ವಾಮಿ ಎಂಬುವರು ರಾಜ­­ಗೋಪಾಲನಗರ ಠಾಣೆಗೆ ದೂರು ಕೊಟ್ಟಿ­ದ್ದರು. ಆಗ ಪ್ರಕರಣ ದಾಖಲಿಸಿ­ಕೊಂಡ ಇನ್‌ಸ್ಪೆಕ್ಟರ್‌ ಗಣಪತಿ, ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್‌) ₨ 24 ಲಕ್ಷ ಕಳವಾಗಿದೆ ಎಂದಷ್ಟೇ ನಮೂದಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನಂತರ ತನಿಖಾ ತಂಡ ಆರೋಪಿ-­ಯನ್ನು ಪತ್ತೆ ಮಾಡಿ, ಕಳವು ಮಾಡಿದ್ದ ಹಣವನ್ನು ವಶಪಡಿಸಿಕೊಂಡಿತ್ತು. ಆದರೆ, ಗಣಪತಿ ಅವರು ವಾರಸು­ದಾ­ರ­ರಿಗೆ ₨ 64 ಲಕ್ಷ ಹಣ ಹಿಂದಿರುಗಿಸಿ, ಉಳಿದ ಹಣವನ್ನು ನೀಡದೆ ವಂಚಿಸಿ­ದ್ದಾರೆ ಎಂಬ ಆರೋಪ ಕೇಳಿ ಬಂದಿತು. ಈ ಸಂಬಂಧ ರಂಗಸ್ವಾಮಿ ಉತ್ತರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಅವರಿಗೆ ದೂರು ಸಲ್ಲಿಸಿದ್ದರು.ದೂರನ್ನು ಪರಿಶೀಲಿಸಿದ ಡಿಸಿಪಿ, ಪ್ರಕರಣ ಸಂಬಂಧ ಇಲಾಖಾ ಮಟ್ಟದ ತನಿಖೆ ನಡೆಸುವಂತೆ ಮಲ್ಲೇಶ್ವರ ಉಪ–ವಿಭಾಗದ ಎಸಿಪಿ ಸಾರಾ ಫಾತಿಮಾ ಅವರಿಗೆ ಸೂಚಿಸಿದ್ದರು. ಅವರು ಸಲ್ಲಿಸಿದ ವರದಿ ಆಧರಿಸಿ ಕಮಿಷನರ್‌ ಈ ಕ್ರಮ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.