ಗುರುವಾರ , ಮೇ 13, 2021
39 °C

ಇಶ್ರತ್ ಎನ್‌ಕೌಂಟರ್ ತನಿಖೆ ಮುಕ್ತಾಯಕ್ಕೆ ಹೈಕೋರ್ಟ್ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್ (ಪಿಟಿಐ): ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದ ತನಿಖೆಯಿಂದ ಐಪಿಎಸ್ ಅಧಿಕಾರಿ ಸತೀಶ್ ವರ್ಮಾ ಅವರನ್ನು ಹೊರಗಿಡಬೇಕು ಎಂಬ ಸಿಬಿಐ ಮನವಿಯನ್ನು ಒಪ್ಪಿಕೊಂಡ ಗುಜರಾತ್ ಹೈಕೋರ್ಟ್, ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಿ ಜುಲೈ 4ರ ವೇಳೆಗೆ ದೋಷಾರೋಪ ಪಟ್ಟಿಯನ್ನು ಸಲ್ಲಿಸುವಂತೆ ಸೂಚಿಸಿದೆ.ವರ್ಮಾ ಅವರು ಎನ್‌ಕೌಂಟರ್ ಪ್ರಕರಣದ ವಿಶೇಷ ತನಿಖಾ ತಂಡದಲ್ಲಿ ಇದ್ದರು. ನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಆಗಲೂ ವರ್ಮಾ ಅವರನ್ನು ಸಿಬಿಐ ತನಿಖಾ ತಂಡದಲ್ಲಿ ಮುಂದುವರಿಸಲಾಗಿತ್ತು.ಇಶ್ರತ್ , ಜಾವೇದ್ ಶೇಖ್, ಅಮ್ಜದ್ ಅಲಿ ರಾಣಾ, ಜೀಸ್‌ಹಾನ್ ಜೋಹರ್ ಅವರನ್ನು ಅಕ್ರಮ ಬಂಧನದಲ್ಲಿ ಇಟ್ಟು ನಂತರ ನಕಲಿ ಎನ್‌ಕೌಂಟರ್‌ನಲ್ಲಿ ಇಶ್ರತ್ ಹತ್ಯೆ ಮಾಡಿರುವ ಆಪಾದನೆಯ ಬಗ್ಗೆ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಹೈಕೋರ್ಟ್ ಸಿಬಿಐಗೆ ಸೂಚಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.