ಸೋಮವಾರ, ಮೇ 10, 2021
21 °C

ಇಸ್ರೇಲ್: ಬೀದಿಗಿಳಿದ ನಾಲ್ಕು ಲಕ್ಷ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ರೇಲ್: ಬೀದಿಗಿಳಿದ ನಾಲ್ಕು ಲಕ್ಷ ಜನ

ಜೆರುಸಲೆಂ, (ಪಿಟಿಐ): ಇಸ್ರೇಲ್ ಇತಿಹಾಸದಲ್ಲಿಯೇ ಇದು ಐತಿಹಾಸಿಕ  ಪ್ರತಿಭಟನೆ, ದೇಶಾದ್ಯಂತ ನಗರಗಳಲ್ಲಿ ಸುಮಾರು 4 ಲಕ್ಷ ಜನರು ಬೀದಿಗಿಳಿದರು. ಜೀವನ ನಿರ್ವಹಣಾ ವೆಚ್ಚ ಹೆಚ್ಚಳವಾಗುತ್ತಿರುವುದನ್ನು ವಿರೋಧಿಸಿ ಈ ಜನರು ಹೋರಾಟಕ್ಕಿಳಿದರು ಮತ್ತು ಆರ್ಥಿಕ ಸುಧಾರಣಾ ಕ್ರಮ ಜಾರಿಗೊಳಿಸುವಂತೆ ಒತ್ತಾಯಿಸಿದರು.ಇಸ್ರೇಲ್‌ನಾದ್ಯಂತ ಶನಿವಾರ ರಾತ್ರಿಯಿಂದಲೇ ಸುಮಾರು 4 ಲಕ್ಷಕ್ಕೂ ಹೆಚ್ಚು ಜನರು ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಳೆದ ಎರಡು ತಿಂಗಳ ಹಿಂದೆಯೇ ಹೋರಾಟದ ಅಲೆ ಆರಂಭವಾಗಿದ್ದವು.ಅಧಿಕಾರದ ಕೇಂದ್ರ ಸ್ಥಳವಾದ ಟೆಲ್ ಅವಿವ್‌ನಲ್ಲಿ ನಡೆದ ಬಹಿರಂಗ ಪ್ರದರ್ಶನದಲ್ಲಿ ದಾಖಲೆಯ 3 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಸಂಪತ್ತು ನ್ಯಾಯಸಮ್ಮತವಾಗಿ ಹಂಚಿಕೆಯಾಗಬೇಕು ಎಂದು ಪ್ರತಿಭಟನಾಗಾರರು ಪ್ರತಿಪಾದಿಸಿದರು.ಪ್ರತಿಭಟನೆಯ ನಾಯಕ ಯೋನ್‌ಟನ್ ಲೇವಿ, `ಈ ವಾತಾವರಣವು ದ್ವಿತೀಯ ಸ್ವಾತಂತ್ರ್ಯ ದಿನಾಚರಣೆಯಂತಾಗಿದೆ~ ಎಂದರು. ಪ್ರತಿಭಟನೆಯ ನಾಯಕ ದಫನಿ ಲೀಫ್ ಮತ್ತು ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಇಟ್ಜಿಕ್ ಶಮುಲಿ ಜನಸ್ತೋಮ ಉದ್ದೇಶಿಸಿ ಮಾತನಾಡಿ, `ಪ್ರಧಾನ ಮಂತ್ರಿಗಳೇ, ಹೊಸ ಇಸ್ರೇಲಿಗಳು ಕನಸುಗಾರರಾಗಿದ್ದು, ಈ ದೇಶವನ್ನು ಜೀವಂತವಾಗಿ ಇಡಬೇಕೆಂದು ನಾವು ಬಯಸುತ್ತೇವೆ, ಅವರು ಬದಲಾವಣೆ ಬಯಸಿದ್ದಾರೆ. ಅವರು ನಿಜವಾದ ಪರಿಹಾರ ಸಿಗುವವರೆಗೂ ವಿರಮಿಸುವವರಲ್ಲ~ ಎಂದರು.ಜೆರುಸಲೆಂನಲ್ಲಿ ಪ್ರಧಾನಿ ಬೆಂಜಮಿನ್ ನೆಟ್‌ನ್ಯಾಹು ನಿವಾಸದ ಸಮೀಪ ಇರುವ ಪ್ಯಾರೀಸ್ ಮೈದಾನದಲ್ಲಿ ಐವತ್ತು ಸಾವಿರ ಜನರು ಜಮಾವಣೆಗೊಂಡಿದ್ದರು ಮತ್ತು ರಸ್ತೆಗಳನ್ನು ಸುತ್ತುವರಿದಿದ್ದಾರೆ. ಕಳೆದ ಬೇಸಿಗೆಯಲ್ಲಿ ಇದರ ಎರಡು ಪಟ್ಟು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಪ್ರತಿಭಟನಾಗಾರರ ಬೇಡಿಕೆಯಂತೆ ಪ್ರಧಾನಿ ಬೆಂಜಮಿನ್  ಅವರು ಕಳೆದ ತಿಂಗಳ ಸಾಮಾಜಿಕ, ಆರ್ಥಿಕ ಸುಧಾರಣೆಗಾಗಿ ತಜ್ಞರ ಸಮಿತಿ ರಚಿಸಿದ್ದರು. ಜೀವನ ನಿರ್ವಹಣ ವೆಚ್ಚ ಕುಸಿತ, ಏಕಸ್ವಾಮ್ಯತೆ ಕಡಿಮೆ ಮಾಡುವುದು, ಪರೋಕ್ಷ ತೆರಿಗೆಗಳನ್ನು ಇಳಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಮಿತಿ ಬೆಳಕು ಚೆಲ್ಲಿತ್ತು.ಪ್ರತಿಭಟನೆಯನ್ನು ಶ್ಲಾಘಿಸಿರುವ ಸ್ಥಳೀಯ ವಿಶ್ಲೇಷಕರು, `ಕೆಲಸದಲ್ಲಿ ನಿಜವಾದ ಪ್ರಜಾಪ್ರಭುತ್ವ~ ಮತ್ತು `ಇಸ್ರೇಲಿಗಳಿಗೆ ಹೊಸ ಸ್ವಾತಂತ್ರ್ಯ ಎಂಬ ಬೇಡಿಕೆಗೆ ಸಹಿ ಮಾಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.