ಬುಧವಾರ, ಏಪ್ರಿಲ್ 21, 2021
30 °C

ಇ-ಐಪಿಒಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ):ಆರಂಭಿಕ ಸಾರ್ವಜನಿಕ ಕೊಡುಗೆ(ಐಪಿಒ)ಗಳ ವಿತರಣೆ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಆಲೋಚಿಸಿರುವ `ಭಾರತೀಯ ಸಾಲಪತ್ರ ಮತ್ತು ವಿನಿಮಯ ಮಂಡಳಿ~        (ಸೆಬಿ), ಇನ್ನು ಮುಂದೆ `ಎಲೆಕ್ಟ್ರಾನಿಕ್-ಐಪಿಒ~ ಆಗಿ ಪರಿವರ್ತಿಸಲಿದೆ.ಐಪಿಒ ಹಂಚಿಕೆಯ ಇಡೀ ಪ್ರಕ್ರಿಯೆಯಲ್ಲಿಯೇ ಸುಧಾರಣೆ ತರಲು ಯೋಜಿಸಲಾಗಿದ್ದು, ಇ-ಐಪಿಒ ಕುರಿತ ಹೊಸ ಮಾರ್ಗಸೂಚಿಗಳನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು `ಸೆಬಿ~ ಪೂರ್ಣಾವಧಿ ಸದಸ್ಯ ರಾಜೀವ್ ಕುಮಾರ್ ಅಗರ್‌ವಾಲ್ ಹೇಳಿದರು.`ಅಸೊಚಾಂ~ ಶುಕ್ರವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇ-ಐಪಿಒ ಚಾಲ್ತಿಗೆ ಬಂದಲ್ಲಿ ವಿತರಣೆ ಕೆಲಸ ಮತ್ತು ಆಸಕ್ತರನ್ನು ತಲುಪುವುದು ಬಹಳ ಸುಲಭವಾಗಲಿದೆ ಎಂದು ಹೇಳಿದರು.ಇ-ಐಪಿಒ ಅನುಕೂಲವೆಂದರೆ ಆನ್‌ಲೈನ್ ಮೂಲಕವೇ ಬಹಳ ಸರಳವಾಗಿ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಹಾಗೂ ಕ್ಷಿಪ್ರಗತಿಯಲ್ಲಿ ಅರ್ಜಿ ಸಲ್ಲಿಸುವುದು. ಇಲ್ಲಿ ಯಾವುದೇ ಅರ್ಜಿ-ಕಾಗದಕ್ಕೆ ಸಹಿ ಹಾಕುವ, ರವಾನೆ ಮಾಡುವ ಅಗತ್ಯವಿರುವುದಿಲ್ಲ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.