ಬೆಂಗಳೂರು: ನಗರದಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಬಳಸಿಕೊಂಡು ಬೆಂಗಳೂರು ಹೊರವಲಯದ ಕೆರೆಗಳನ್ನು ಭರ್ತಿ ಮಾಡುವ ಉದ್ದೇಶಿತ ಏತ ನೀರಾವರಿ ಯೋಜನೆಗೆ ತಮಿಳುನಾಡು ತಗಾದೆ ತೆಗೆದಿದೆ.

ತಮಿಳುನಾಡಿನ ಒತ್ತಡದ ಹಿನ್ನೆಲೆಯಲ್ಲಿ ಯೋಜನೆಯ ಬಗ್ಗೆ ಕರ್ನಾಟಕದಿಂದ ಕೇಂದ್ರ ಸರ್ಕಾರ ವಿವರಣೆ ಕೋರಿದೆ.

ವರ್ತೂರು ಕಣಿವೆ (ಹಿಂದಿನ ದಕ್ಷಿಣ ಪಿನಾಕಿನಿ ನದಿ) ಮೂಲಕ ಹರಿಯುವ ಕೊಳಚೆ ನೀರನ್ನು ಬಳಸಿಕೊಂಡು ಹೊಸಕೋಟೆ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕುಗಳ ಕೆರೆ ತುಂಬಿಸುವ 42 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಮಾರ್ಚ್ನಲ್ಲಿ ನಡೆದ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದ ಕೃಷ್ಣಗಿರಿಯ ಸಂಸದ ಇ.ಜಿ.ಸುಗುವನಂ, ಕೇಂದ್ರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದರು.

ದಕ್ಷಿಣ ಪೆನ್ನಾರ್ (ದಕ್ಷಿಣ ಪಿನಾಕಿನಿ ನದಿಯನ್ನು ತಮಿಳುನಾಡಿನಲ್ಲಿ ಈ ಹೆಸರಿನಿಂದ ಕರೆಯುತ್ತಾರೆ) ನದಿ ಕೃಷ್ಣಗಿರಿ ಜಿಲ್ಲೆಯ 38,000 ಎಕರೆ ಕೃಷಿ ಭೂಮಿಗೆ ನೀರುಣಿಸುತ್ತದೆ. ಈ ನದಿಗೆ ಚೆಕ್ಡ್ಯಾಂ ನಿರ್ಮಿಸಲು ಕರ್ನಾಟಕ ಪ್ರಯತ್ನಿಸುತ್ತಿದೆ ಎಂದು ಕೃಷ್ಣಗಿರಿ ಸಂಸದ ಆರೋಪಿಸಿದ್ದಾರೆ.

ಈ ನದಿಯ ನೀರನ್ನು ಕೃಷ್ಣಗಿರಿ ಜನರು ಕಡಿಯಲು ಉಪಯೋಗಿಸುತ್ತಿದ್ದಾರೆ. ಕರ್ನಾಟಕ ಚೆಕ್ಡ್ಯಾಂ ನಿರ್ಮಿಸಿದಲ್ಲಿ ಸಂಪೂರ್ಣವಾಗಿ ಕೃಷ್ಣಗಿರಿ ಜಿಲ್ಲೆ ಮರುಭೂಮಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದರು. ಏಪ್ರಿಲ್ 11ರಂದು ರಾಜ್ಯ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿರುವ ಕೇಂದ್ರ ಜಲಸಂಪನ್ಮೂಲ ಸಚಿವಾಲಯ, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೋರಿದೆ.

ವರ್ತೂರು ಕಣಿವೆಯ ಮೂಲಕ ಹರಿಯುವ ಕೊಳಚೆ ನೀರನ್ನು ಬಳಸಿ ಹೊಸಕೋಟೆ ಮತ್ತು ಚಿಕ್ಕಬಳ್ಳಾಪುರ ಪಟ್ಟಣಗಳ ಸುತ್ತಮುತ್ತಲಿನ 29 ಕೆರೆಗಳನ್ನು ಭರ್ತಿ ಮಾಡಲು ರಾಜ್ಯದ ಸಣ್ಣ ನೀರಾವರಿ ಇಲಾಖೆ ಯೋಜನೆ ರೂಪಿಸಿದೆ. ಯಲಹಂಕದಿಂದ ಆರಂಭವಾಗುವ ವರ್ತೂರು ಕಣಿವೆಯು ಎಲೆಮಲ್ಲಪ್ಪ ಶೆಟ್ಟಿ ಕೆರೆ, ವರ್ತೂರು ಕೆರೆಯ ಮೂಲಕ ಸಮೇತನಹಳ್ಳಿ ಕೆರೆಯನ್ನು ಸೇರುತ್ತದೆ. ಸರ್ಕಾರದ ಉದ್ದೇಶಿತ ಯೋಜನೆ ಅನುಷ್ಠಾನಗೊಂಡರೆ ಹೊಸಕೋಟೆ ಮತ್ತು ಚಿಕ್ಕಬಳ್ಳಾಪುರ ಪಟ್ಟಣಗಳ ಸುತ್ತಮುತ್ತ ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಲಿದೆ.

ಸಣ್ಣ ನೀರಾವರಿ ಇಲಾಖೆಯು ಇತ್ತೀಚೆಗೆ ಕೆ.ಆರ್.ಪುರ ಬಳಿಯ ಎಲೆಮಲ್ಲಪ್ಪ ಶೆಟ್ಟಿ ಕೆರೆಯಿಂದ ಕೊಳಚೆ ನೀರನ್ನು ಹೊಸಕೋಟೆ ಸಮೀಪದ ದೊಡ್ಡಕೆರೆಗೆ ತಿರುಗಿಸಿತ್ತು. ಬಳಿಕ ದೊಡ್ಡಕೆರೆ ಸುತ್ತಮುತ್ತ ಅಂತರ್ಜಲದ ಮಟ್ಟ ಗಣನೀಯವಾಗಿ ಏರಿಕೆಯಾಗಿತ್ತು. ಅಚ್ಚರಿಯ ವಿಷಯವೆಂದರೆ ಈ ನೀರು ಕುಡಿಯಲು ಯೋಗ್ಯವಾಗಿದೆ ಎಂಬುದು ಪರೀಕ್ಷೆಯಿಂದ ತಿಳಿದುಬಂದಿತ್ತು.

`ಕೆರೆಗೆ ಕೊಳಚೆ ನೀರನ್ನು ತುಂಬಿಸಿದ ಬಳಿಕ ಅದು ಭೂಮಿಯಲ್ಲಿ ಇಂಗಿತು. ಅದಾದ ನಂತರ ಅಲ್ಲಿನ ಅಂತರ್ಜಲದ ಮಟ್ಟ ಏರಿಕೆಯಾಗಿ ಹೊಸಕೋಟೆ ಸುತ್ತಮುತ್ತಲಿನ ಹಲವು ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯಿತು. ಎಲೆಮಲ್ಲಪ್ಪ ಶೆಟ್ಟಿ ಕೆರೆ ವರ್ತೂರು ಕಣಿವೆಯ ಒಂದು ಭಾಗ. ಹಿಂದೆ ಆರಂಭಿಸಿದ್ದ ಯೋಜನೆಯನ್ನೇ ಈಗ ಬೇರೆ ಕಡೆಗಳಿಗೂ ವಿಸ್ತರಿಸಲಾಗುತ್ತಿದೆ~ ಎಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣಮೂರ್ತಿ ವಿವರಿಸಿದರು.

ದಕ್ಷಿಣ ಪಿನಾಕಿನಿ ನದಿ ಮೂರು ದಶಕಗಳ ಹಿಂದೆಯೇ ಬತ್ತಿ ಹೋಗಿದೆ. ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರು ಈಗ ನದಿ ಕಣಿವೆಯಲ್ಲಿ ಹರಿಯುತ್ತಿದೆ. ಈ ಕಣಿವೆ ಕಾವೇರಿಯ ನದಿ ಕಣಿವೆ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹೀಗಾಗಿ ಆಕ್ಷೇಪ ಎತ್ತಲು ಅವಕಾಶವೇ ಇಲ್ಲ ಎನ್ನುತ್ತಾರೆ ಅವರು.

ವರ್ತೂರು ಕಣಿವೆ ಹೊಸೂರಿನ ಮೂಲಕ ತಮಿಳುನಾಡು ಪ್ರವೇಶಿಸುತ್ತದೆ. ಪ್ರತಿವರ್ಷ ಅಂದಾಜು 3.5 ಟಿಎಂಸಿ ಅಡಿ ನೀರು (ಕೊಳಚೆ ನೀರು) ಕರ್ನಾಟಕದಿಂದ ತಮಿಳುನಾಡಿಗೆ ಈ ಕಣಿವೆ ಮೂಲಕ ಹರಿಯುತ್ತದೆ. ಈ ನೀರನ್ನು ಬಳಸಿಕೊಳ್ಳುವ ಯೋಜನೆಗೆ ರಾಜ್ಯ ಸರ್ಕಾರ ಇನ್ನೂ ಒಪ್ಪಿಗೆ ನೀಡಿಲ್ಲ.

ವರ್ತೂರು ಕಣಿವೆಯ ಮೂಲಕ ಹರಿಯುವ ಕೊಳಚೆ ನೀರು ಕರ್ನಾಟಕದಲ್ಲಿ ಕೃಷಿ ಬಳಕೆಗೆ ಯೋಗ್ಯವಲ್ಲ. ಆದರೆ, ಹರಿಯುವ ಸಂದರ್ಭದಲ್ಲಿ ನೈಸರ್ಗಿಕವಾಗಿ ಶುದ್ಧೀಕರಣಗೊಳ್ಳುವುದರಿಂದ ತಮಿಳುನಾಡಿನಲ್ಲಿ ಕೃಷಿ ಬಳಕೆಗೆ ಯೋಗ್ಯವಾಗುತ್ತಿದೆ. ಕರ್ನಾಟಕ ಈ ನೀರನ್ನು ಏತ ನೀರಾವರಿ ಅಥವಾ ತಿರುವು ಯೋಜನೆ ಮೂಲಕ ಬೇರೆಡೆ ಹರಿಸಿದರೆ ಬಳಕೆಗೆ ಯೋಗ್ಯವಾಗಲಿದೆ.

ಈ ವಿವಾದ ಕುರಿತು ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಪಿ.ಎನ್.ಶ್ರೀನಿವಾಸಾಚಾರಿ ಅವರನ್ನು ಸಂಪರ್ಕಿಸಿದಾಗ, `ಚಿಕ್ಕಬಳ್ಳಾಪುರ ಮತ್ತು ಹೊಸಕೋಟೆ ಬರದಿಂದ ತೀವ್ರ ಸಮಸ್ಯೆ ಎದುರಿಸುತ್ತಿವೆ.

ಅಂತರ್ಜಲದ ಮಟ್ಟ 1,000 ಅಡಿಗೂ ಕೆಳಕ್ಕೆ ಕುಸಿದಿದೆ. ಅಲ್ಲದೇ ಅಂತರ್ಜಲದಲ್ಲಿ ಫ್ಲೋರೈಡ್ ಪ್ರಮಾಣವೂ ಹೆಚ್ಚಿದೆ. ಏತ ನೀರಾವರಿ ಯೋಜನೆ ಅಲ್ಲಿನ ಜನರ ಬಹುದಿನದ ಬೇಡಿಕೆ. ಇದರಿಂದ ಅವರ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಅಲ್ಲದೇ ತಮಿಳುನಾಡು ಆರೋಪಿಸಿದಂತೆ ರಾಜ್ಯ ಸರ್ಕಾರ ಅಲ್ಲಿ ಚೆಕ್ ಡ್ಯಾಂ ನಿರ್ಮಿಸುತ್ತಿಲ್ಲ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.