ನೂರಾರು ಆಲೋಚನೆಗಳು, ದುಗುಡ ದುಮ್ಮಾನಗಳು, ಹೃದಯದಲ್ಲಿ ಮಡುಗಟ್ಟಿ ನಿಂತ ಆತಂಕಗಳು, ಕಣ್ಣಲ್ಲೇ ಕಾಣಿಸುವ ಭಯ ಇವೆಲ್ಲದರ ಮಧ್ಯೆ ಹೆಗಲಿಗೊಂದು ಬ್ಯಾಗ್ ಹಾಕಿಕೊಂಡು ಕಾಲೇಜಿಗೆ ಬಂದ ಮೊದಲ ದಿನ ಸೀನಿಯರ್ಸ್ ಹೇಳಿದ ಕಿವಿಮಾತುಗಳು ಇನ್ನೂ ನೆನಪಿನಾಳದಿಂದ ಮಾಸಿಲ್ಲ.

ಆದರೆ, ಈಗ ಆ ಸೀನಿಯರ್ಸ್ ತಮ್ಮ ಜವಾಬ್ದಾರಿಯ ಪಟ್ಟ ನಮ್ಮ ಮುಡಿಗೇರಿಸಿ ಆಗಲೇ ವಿದಾಯ ಹೇಳಿದ್ದಾಗಿದೆ. ಈಗ ನಾವೇ ಸೀನಿಯರ್ಸ್. ಅಲ್ಲ, ಅಲ್ಲ, ನಾನೇ ಸೀನಿಯರ್!
ಈ ಗಮ್ಮತ್ತು ಇರೋದಾದರೂ ಎಷ್ಟು ದಿನ..? ಹೊಸ ನೀರು ಬಂದ ಮೇಲೆ ಹಳೇ ನೀರು ಹೋಗಲೇಬೇಕಲ್ಲ. ಆದರೆ, ಇರೋವರೆಗೂ ಪ್ರೀತಿಯಿಂದ ಆತ್ಮೀಯತೆಯಿಂದ ಇರಬೇಕೆಂಬುದೇ ನನ್ನ ಅಭಿಲಾಷೆ.

ಮೊದಮೊದಲಿಗೆ ಕಾಲೇಜಿಗೆ ಕಾಲಿಟ್ಟಾಗ ಸೀನಿಯರ್ಸ್ ಅಂದರೆ ಅದೇನೋ ಒಂಥರ ಭಯ. ರ್ಯಾಗಿಂಗ್ ಮಾಡುವರಾ? ಸಿಕ್ಕಾಪಟ್ಟೆ ಕೆಲಸ ಕೊಡ್ತಾರಾ? ಅವರ ಮಾತು ಕೇಳದೆ ಹೋದರೆ ನೋಟ್ಸ್ ಕೊಡದೆ ಸತಾಯಿಸುತ್ತಾರಾ? ಅಂತ ಹಲವಾರು ಆಲೋಚನೆಗಳು ತಲೆಯಲ್ಲಿ ಸುತ್ತುತ್ತಿದ್ದವು.

ಆದರೆ, ಮೊದಲ ದಿನವೇ ಅವರು `ವೆಲ್ಕಮ್ ಪಾರ್ಟಿ~ ಇಟ್ಕೊಂಡು ಒಬ್ಬರಿಗೊಬ್ಬರು ಪರಿಚಯಿಸಿಕೊಂಡಾಗಲೇ ಗೊತ್ತಾಗಿದ್ದು ನಮ್ಮ ಸೀನಿಯರ್ಸ್ ಎಷ್ಟೊಂದು ಒಳ್ಳೆಯವರು ಅಂತ.ಏನಾದರೂ ತಿಳಿಯದೆ ಹೋದ್ರೆ `ಅಣ್ಣಾ ಇದು ಗೊತ್ತಾಗ್ತಿಲ್ಲ~ ಅಂತ ಬಳಿ ಹೋದಾಗ ತೋರುತ್ತಿದ್ದ ಪ್ರೀತಿ ಕಂಡು ಅವರ ಮೇಲಿನ ಅಭಿಮಾನ ಇಮ್ಮಡಿಯಾಗಿತ್ತು.

ಅವರೆಂದೂ ನಾವು ಸೀನಿಯರ್ಸ್ ಎಂದು ನಮ್ಮ ಮೇಲೆ ಗರ್ವ ಪಡುವುದಾಗಲಿ, ನಮ್ಮ ಮೇಲೆ ಅಧಿಕಾರ ಚಲಾಯಿಸುವುದಾಗಲಿ ಮಾಡಿದವರಲ್ಲ. ಬದಲಾಗಿ ನಮ್ಮನ್ನು ಅವರೊಂದಿಗೆ ಸೇರಿಸಿಕೊಂಡು ಸಂತಸ ಹಂಚಿಕೊಳ್ಳುತ್ತಿದ್ದರು.

ಆದರೆ, ಅಭ್ಯಾಸದಲ್ಲಿ ಹಿಂದೆ ಬಿದ್ರೆ ಮುಲಾಜಿಲ್ಲದೇ ಬಯ್ಯೋರು ಒಡಹುಟ್ಟಿದ ಅಣ್ಣನ ಥರ. ಈಗ ಅವರೆಲ್ಲರೂ ಒಂದೊಂದು ಹುದ್ದೆಯಲ್ಲಿದ್ದಾರೆ. ಅವರ ನೆನಪುಗಳು ಮಾತ್ರ ನನ್ನಲ್ಲಿವೆ.
ಸದ್ಯ ಅವರ ಸ್ಥಾನ ನಾವು ಆಕ್ರಮಿಸಿದ್ದೆೀವೆ. ಅವರ ರೀತಿಯಲ್ಲಿಯೇ ನಾವು ಇರಬೇಕು. ಬರುವ ಜ್ಯೂನಿಯರ್ಸ್ಗೆ ವೆಲ್ಕಮ್ ಮಾಡಬೇಕು.

ಒಳ್ಳೆಯ ಕಾರ್ಯಕ್ರಮ ಇಟ್ಟುಕೊಂಡು ಅವರಿಗೆ ಮನರಂಜನೆ ಕೊಡಬೇಕು. ಒಳ್ಳೆಯ ಸಲಹೆ ಸೂಚನೆ ಕೊಡಬೇಕು; ಹೀಗೆ ಹಲವಾರು ಆಲೋಚನೆಗಳನ್ನಿಟ್ಟುಕೊಂಡು ಕಾಯುತ್ತಾ ಇದ್ದೇವೆ. `ಅಣ್ಣಾ~ ಅಂತ ಅನ್ನಿಸಿಕೊಳ್ಳಬೇಕು ಎನ್ನುವ ಹಂಬಲದಿಂದ.
ಸಹೋದರರೇ ನಿಮಗಿದೋ ಸ್ವಾಗತ...

ಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.