ಬುಧವಾರ, ಜನವರಿ 22, 2020
20 °C

ಈಜುಕೊಳಕ್ಕೆ ಅನುದಾನ: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ವಿದ್ಯಾರಣ್ಯಪುರ ವಾರ್ಡ್‌ ವ್ಯಾಪ್ತಿಯಲ್ಲಿ ಜಾಗ ನೀಡಿದರೆ ಸಾರ್ವಜನಿಕ ಈಜುಕೊಳ ನಿರ್ಮಿಸಲು ಅನುದಾನ ಮಂಜೂರು ಮಾಡಲಾಗುವುದು ಎಂದು ಬಿಬಿ ಎಂಪಿ ಆಯುಕ್ತ  ಲಕ್ಷ್ಮೀ ನಾರಾಯಣ ಹೇಳಿದರು.ಎಚ್‌ಎಂಟಿ ಬಡಾವಣೆ 2ನೇ ಬ್ಲಾಕ್‌ನಲ್ಲಿ ರೂ 30 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಬಿಬಿಎಂಪಿ ವಿದ್ಯಾರಣ್ಯ ಪುರ ವಾರ್ಡ್‌ ಕಚೇರಿಯ ಉದ್ಘಾ ಟನೆಯ ಸಂದರ್ಭ  ಅವರು ಮಾತನಾಡಿದರು.ಬಿಬಿಎಂಪಿ ಉಪಮೇಯರ್‌ ಇಂದಿರಾ, ಆಡಳಿತ ಪಕ್ಷದ ನಾಯಕ ಅಶ್ವತ್ಥ ನಾರಾಯಣಗೌಡ, ಬಿಬಿ ಎಂಪಿ ಸದಸ್ಯರಾದ ನಂದಿನಿ ಕೆ. ಶ್ರೀನಿವಾಸ್‌, ಮುನೀಂದ್ರ ಕುಮಾರ್‌, ಈ.ಪಿಳ್ಳಪ್ಪ, ಕೆ.ಆರ್‌. ಯಶೋಧ ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)