ಮಂಗಳವಾರ, ಮೇ 11, 2021
25 °C

ಈಡಬ್ಲ್ಯುಎಸ್ ಭೂಮಿ ರಕ್ಷಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 115 ರ ಈಡಬ್ಲ್ಯುಎಸ್ ಸಮುಚ್ಚಯದ ಭೂಮಿಯನ್ನು ಖಾಸಗಿ ಕಂಪೆನಿಯಿಂದ ರಕ್ಷಿಸಬೇಕು~ ಎಂದು ದಲಿತ ಮತ್ತು ಅಲ್ಪಸಂಖ್ಯಾತರ ಭೂಮಿ ರಕ್ಷಣಾ ಒಕ್ಕೂಟವು ಒತ್ತಾಯಿಸಿತು.ಸಮತಾ ಸೈನಿಕ ದಳದ ರಾಜ್ಯ ಅಧ್ಯಕ್ಷ ಎಂ.ವೆಂಕಟಸ್ವಾಮಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಆ ಸ್ಥಳದಲ್ಲಿ 3000 ಮನೆಗಳನ್ನು ನಿರ್ಮಸಲು ಅವಕಾಶವಿದೆ. ಆದರೆ, ಅಲ್ಲಿ ಬರೀ 1640 ಮನೆಗಳನ್ನು ನಿರ್ಮಿಸಿ ಮೂಲ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಖಾಸಗಿ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಕ್ಕೆ ಪ್ರತಿಯಾಗಿ 8 ಎಕರೆ ಭೂಮಿ ಬಿಟ್ಟು ಕೊಡಲು ತೀರ್ಮಾನಿಸಲಾಗಿದೆ~ ಎಂದು ಆರೋಪಿಸಿದರು.`ಈಡಬ್ಲ್ಯುಎಸ್ ಭೂಮಿಯನ್ನು ಕಬಳಿಸಲು ಖಾಸಗಿ ಕಂಪೆನಿಯೊಂದಿಗೆ ಮಾಡಿಕೊಂಡಿರುವ ಜನ ವಿರೋಧಿ ಒಪ್ಪಂದವನ್ನು ಈ ಕೂಡಲೇ ರದ್ದುಗೊಳಿಸಬೇಕು. ಅದೇ ಭೂಮಿಯನ್ನು ನಂಬಿಕೊಂಡಿರುವ ಅಲ್ಲಿ ವಾಸವಿರುವ ವಸತಿಹೀನರಿಗೆ ಅದೇ ಜಾಗದಲ್ಲಿ ಮನೆಗಳನ್ನು ನಿರ್ಮಿಸಿ ಕೊಡಬೇಕು~ ಎಂದು ಒತ್ತಾಯಿಸಿದರು.`ದಲಿತರ ಮತ್ತು ಅಲ್ಪಸಂಖ್ಯಾತರ ಭೂಮಿ ರಕ್ಷಣೆಗಾಗಿ ಏ.7 ರಂದು ಬೆಂಗಳೂರು ಮಹಾನಗರ ಪಾಲಿಕೆ ಎದುರು ಧರಣಿ ಕೈಗೊಳ್ಳಲಾಗುವುದು. ಅದರ ನಂತರ ಒಂದು ವಾರ ಕಾಲಾವಧಿಯನ್ನು ನೀಡಲಾಗುವುದು. ಇದಕ್ಕೆ ಸರಿಯಾದ ಸ್ಪಂದನೆ ದೊರೆಯದಿದ್ದರೆ, ಏ.16 ರಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಿರಂತರ ಧರಣಿ ನಡೆಸಲಾಗುವುದು~ ಎಂದು ಎಚ್ಚರಿಸಿದರು.ಒಕ್ಕೂಟದ ಅಧ್ಯಕ್ಷ ರಾಜೇಂದ್ರನ್ ಪ್ರಭಾಕರ್, ಸ್ವಾಭಿಮಾನಿ ಬಹುಜನರ ವೇದಿಕೆಯ ಎಸ್.ಎಂ.ಮಾರಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.