ಈಡಿಗರ ಸಂಘಕ್ಕೆ ಆಯ್ಕೆ

7

ಈಡಿಗರ ಸಂಘಕ್ಕೆ ಆಯ್ಕೆ

Published:
Updated:

ಬೆಂಗಳೂರು: ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷರಾಗಿ ಜೆ.ಪಿ. ನಾರಾಯಣಸ್ವಾಮಿ ಅವರು ಪುನರಾಯ್ಕೆಯಾಗಿದ್ದಾರೆ.ನಗರದ ಶೇಷಾದ್ರಿಪುರದಲ್ಲಿರುವ ಈಡಿಗರ ಭವನದಲ್ಲಿ ಭಾನುವಾರ ನಡೆದ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ನಾರಾಯಣಸ್ವಾಮಿ ಅವರು ಬಹುಮತದಿಂದ ಮರು ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಎಂ.ತಿಮ್ಮೇಗೌಡ, ಜಿ.ಕೆ. ಓಬಯ್ಯ, ಡಿ.ರವೀಂದ್ರನಾಥ್ ಹಾಗೂ ಮಹಿಳಾ ಮೀಸಲು ಸ್ಥಾನದ ಅಧ್ಯಕ್ಷೆಯಾಗಿ ಸುಧಾ ಕೃಷ್ಣಸ್ವಾಮಿ ಆಯ್ಕೆಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಜೆ. ಕಾಳೇಗೌಡ, ಖಜಾಂಚಿಯಾಗಿ ಕೆ.ಜಿ. ಹನುಮಂತರಾಜು, ಜಂಟಿ ಕಾರ್ಯದರ್ಶಿಯಾಗಿ ಟಿ. ವಾಸನ್ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಎನ್. ಉದಯ್ ಆಯ್ಕೆಯಾಗಿದ್ದಾರೆ.ಬೆಂಗಳೂರು ನಗರ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ.ಅಂಬರೀಷ್, ಈಶ್ವರಯ್ಯ, ಕೆ.ಎಸ್. ದುಶ್ಯಂತ್, ಎನ್.ಟಿ. ನಾರಾಯಣ್, ಟಿ. ಮುತ್ತುರಾಜ್, ವಿ.ಶ್ರೀನಿವಾಸಯ್ಯ, ಟಿ.ಸುರೇಶ್ ಹಾಗೂ ಎಂ.ಪಿ. ಹರಿಚರಣ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry