ನವದೆಹಲಿ (ಪಿಟಿಐ): ಈರುಳ್ಳಿ ಮೇಲಿನ `ಕನಿಷ್ಠ ರಫ್ತು ಬೆಲೆ~ಯನ್ನು (ಎಂಇಪಿ) ಕೇಂದ್ರ ಸರ್ಕಾರವು ಪ್ರತಿ ಟನ್ಗೆ 250 ಡಾಲರ್ನಿಂದ 150 ಡಾಲರ್ಗೆ (ರೂ 7800) ಇಳಿಸಿದೆ.

ಈರುಳ್ಳಿ ರಫ್ತಿಗೆ ಕಡಿವಾಣ ಹಾಕಲು ಗರಿಷ್ಠ ಪ್ರಮಾಣದ `ಎಂಇಪಿ~ ವಿಧಿಸಲಾಗಿತ್ತು. ಈಗ ಆ ನಿರ್ಬಂಧ ಸಡಿಲಿಸಲಾಗಿದೆ. ಗರಿಷ್ಠ ಪ್ರಮಾಣದ `ಎಂಇಪಿ~ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ರೈತರು ಮತ್ತು ವರ್ತಕರು ಈಗ ಸಮಾಧಾನದ ನಿಟ್ಟುಸಿರುಬಿಟ್ಟಿದ್ದಾರೆ. ಪ್ರತಿ ಟನ್ಗೆ 150 ಡಾಲರ್ಗಳಿಗೆ `ಎಂಇಪಿ~ ಇಳಿಸಿರುವ ಸರ್ಕಾರದ ನಿರ್ಧಾರವನ್ನು ಬೆಳೆಗಾರರು ಸ್ವಾಗತಿಸಿದ್ದಾರೆ.

ದೇಶಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯು ಪ್ರತಿ ಕೆ.ಜಿಗೆ ರೂ 2.50 ರಿಂದ 3ಗಳಿಗೆ ಇಳಿದು ಉತ್ಪಾದನಾ ವೆಚ್ಚಕ್ಕಿಂತ (ರೂ 4) ಕಡಿಮೆಯಾಗಿರುವ ಕಾರಣ ಬೆಳೆಗಾರರು ತೀವ್ರ ನಷ್ಟಕ್ಕೆ ಗುರಿಯಾಗಿದ್ದರು. ರಫ್ತು ನಿರ್ಬಂಧಿಸಲು ಗರಿಷ್ಠ ಪ್ರಮಾಣದಲ್ಲಿ ವಿಧಿಸಲಾಗಿದ್ದ `ಎಂಇಪಿ~ಯನ್ನು ಇಳಿಸಿರುವುದರಿಂದ ರಫ್ತು ಪ್ರಮಾಣ ಗಮನಾರ್ಹವಾಗಿ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.

ಬೆಂಗಳೂರು ರೋಸ್ ಮತ್ತು ಕೃಷ್ಣಪುರಂ ಈರುಳ್ಳಿ ಹೊರತುಪಡಿಸಿ, ಇತರ ಮಾದರಿಯ ಈರುಳ್ಳಿಗಳ ಮೇಲಿನ ಕನಿಷ್ಠ ರಫ್ತು ಬೆಲೆ ಇಳಿಸಲಾಗಿದೆ. ಇದರಿಂದ ಜನವರಿ ತಿಂಗಳಲ್ಲಿ ರಫ್ತು ಪ್ರಮಾಣವು, ಡಿಸೆಂಬರ್ ತಿಂಗಳ 90 ಸಾವಿರ ಟನ್ಗಳಿಂದ 1.50 ಲಕ್ಷ ಟನ್ಗಳಿಗೆ ಏರಲಿದೆ ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.