ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಅಚ್ಚುಕಟ್ಟು ಪ್ರದೇಶಗಳ ವಿವಿಧ ಕಾಲುವೆಗಳಿಗೆ ನೀರು ಹರಿಸುವ ಮಹತ್ವದ ನೀರಾವರಿ ಸಲಹಾ ಸಮಿತಿ ಸಭೆ ಇದೇ 11ರಂದು ಬೆಳಿಗ್ಗೆ 11ಕ್ಕೆ ಇಲ್ಲಿಯ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿದೆ.

ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಹೊಸ ನೀರಾವರಿ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಸಚಿವ ಎಸ್.ಆರ್. ಪಾಟೀಲ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ನೂತನ ಸಲಹಾ ಸಮಿತಿಯ ಮೊದಲ ಸಭೆ ನಡೆಯಲಿದೆ.

ಪ್ರತಿ ಬಾರಿಯೂ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರೇ ಈ ಸಮಿತಿಯ ಅಧ್ಯಕ್ಷರಾಗಿರುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಜನಪ್ರತಿನಿಧಿಗಳನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಸಮಿತಿಯಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಸಂಸದರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಪ್ರತಿ ವರ್ಷವೂ ಜುಲೈ 25ರ ನಂತರ ಕಾಲುವೆಗೆ ನೀರು ಹರಿಸಲಾಗುತ್ತಿತ್ತು. ಆದರೆ ಈ ಬಾರಿ ಜಿಲ್ಲೆಯವರೇ ನೀರಾವರಿ ಸಚಿವರಾಗಿರುವುದರಿಂದ ಜುಲೈ 25ಕ್ಕಿಂತಲೂ ಮೊದಲೇ ನೀರನ್ನು ಕಾಲುವೆಗೆ ಹರಿಸಬೇಕು ಎನ್ನುವ ಕೂಗು ಬಲವಾಗಿದೆ.

ಕಳೆದ ವರ್ಷ ಕೈಕೊಟ್ಟ ಮಳೆಯಿಂದ ಬರಿದಾಗಿದ್ದ ಆಲಮಟ್ಟಿ ಜಲಾಶಯದಲ್ಲೀಗ ನೀರು ಹೆಚ್ಚಿಗೆ ಬರುತ್ತಿದೆ. ಕಾಲುವೆಗೆ ನೀರು ಹರಿಸುವುದರ ಪೂರ್ವಭಾವಿಯಾಗಿ ಕೃಷ್ಣಾ ನದಿ ನೀರು ಹಂಚಿಕೆಯ ನೀರಾವರಿ ಸಲಹಾ ಸಮಿತಿಯ ಸಭೆ ಮೊದಲ ಬಾರಿಗೆ ಸೇರಲಿದೆ.

ಪ್ರಬಲ ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಕಾಟಾಚಾರಕ್ಕೆ ಎಂಬಂತೆ ಮಾತ್ರ ನಡೆಯುತ್ತಿದ್ದ ಈ ಸಭೆಗೆ ಸಚಿವರು ಅಧ್ಯಕ್ಷರಾಗಿರುವುದರಿಂದ ಇಲ್ಲಿ ನಿರ್ಣಯಿಸಲ್ಪಟ್ಟ ನಿರ್ಣಯಗಳು ಕಾರ್ಯರೂಪಕ್ಕೆ ಬರಬೇಕು ಎನ್ನುತ್ತಾರೆ ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ.

ಪ್ರತಿವರ್ಷವೂ ಕಾಲುವೆಗೆ ನೀರು ಹರಿಸುವ, ರೈತರ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತದೆ, ಆದರೆ ಅದರ ಸಮರ್ಪಕ ಅನುಷ್ಠಾನ ಮಾತ್ರ ಆಗುವುದೇ ಇಲ್ಲ. ರೈತರ ಸಮಸ್ಯೆ ಪರಿಹರಿಸುವ ಈ ಮಹತ್ವದ ಸಭೆ ಕೇವಲ ಸಭೆಯಲ್ಲಿ ಮುಕ್ತಾಯಗೊಳ್ಳದೇ ಅದು ರೈತರಿಗೆ ಉಪಯೋಗವಾಗಲಿ ಎನ್ನುವುದೇ ಅವರ ಆಗ್ರಹವಾಗಿದೆ.

ವಾರಾಬಂದಿ ಪದ್ಧತಿ ಕಟ್ಟು ನಿಟ್ಟಾಗಿ ಜಾರಿಗೆ ಬಾರದ್ದರಿಂದ ಕಾಲುವೆಯ ಕೊನೆ ಹಂತದಲ್ಲಿ ನೀರು ತಲುಪುವುದೇ ಇಲ್ಲ, ಅಲ್ಲದೇ ಹೆಚ್ಚು ನೀರು ಬಳಕೆಯಿಂದ ಸವುಳು-ಜವುಳು ಸಮಸ್ಯೆ ವ್ಯಾಪಕವಾಗಿದೆ. ಅದರ ನಿಯಂತ್ರಣಕ್ಕಾಗಿ ರೈತರಲ್ಲಿ ನೀರಿನ ಬಗ್ಗೆ ಜಾಗೃತಿ, ಸವುಳು-ಜವುಳು ನಿವಾರಣೆಯಲ್ಲಿ ಬಸಿಗಾಲುವೆ ನಿರ್ಮಾಣ ಸೇರಿದಂತೆ ಇನ್ನೀತರ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಅಗ್ರಹವಾಗಿದೆ. ನೀರು ಬಳಕೆದಾರರ ಸಂಘ ರಚಿಸಿ ಕಾಲುವೆಗಳನ್ನು ರೈತರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಆ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚಿಸಿ ನೀರು ಬಳಕೆದಾರರ ಸಂಘ ರಚಿಸಿ ಎಂದು ರೈತ ಬಿ.ಎಚ್. ಗಣಿ ಆಗ್ರಹಿಸುತ್ತಾರೆ. ಒಟ್ಟಾರೇ ನೀರಾವರಿ ಸಲಹಾ ಸಮಿತಿಯಲ್ಲಿ ಚರ್ಚಿಸಿದ ವಿಷಯಗಳು ಕಾರ್ಯಾನುಷ್ಠಾನಕ್ಕೆ ಬರಲಿ ಎಂಬುದೇ ರೈತರ ಆಶಯವಾಗಿದೆ.

ಜಲಾಶಯದಲ್ಲಿ ನೀರಿನ ಸಂಗ್ರಹ: 123 ಟಿ.ಎಂ.ಸಿ. ಅಡಿ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ 72 ಟಿ.ಎಂ.ಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ. 519.6 ಮೀ ಎತ್ತರದ ಆಲಮಟ್ಟಿ ಜಲಾಶಯದಲ್ಲಿ 515.9 ಮೀಟರ್ವರೆಗೆ ನೀರು ಸಂಗ್ರಹವಾಗಿದ್ದು, ಜಲಾಶಯಕ್ಕೆ 50 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ 20,000 ಕ್ಯೂಸೆಕ್ ನೀರನ್ನು ನಾರಾಯಣಪುರ ಜಲಾಶಯಕ್ಕೆ ಬಿಡಲಾಗುತ್ತಿದೆ. ಇದರಿಂದ 125 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಪ್ರಾರಂಭಗೊಂಡಿದೆ ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.

ನೀರಾವರಿ ಸಲಹಾ ಸಮಿತಿ ಸಭೆ ಇಂದು
ವಿಜಾಪುರ:ಆಲಮಟ್ಟಿ ಮತ್ತು ನಾರಾಯಣಪೂರ ಜಲಾಶಯಗಳಿಂದ ಕಾಲುವೆಗಳಿಗೆ ನೀರು ಬಿಡುವ ಅವಧಿ ನಿರ್ಧರಿಸಲು ನೀರಾವರಿ ಸಲಹಾ ಸಮಿತಿ ಸಭೆ ಇದೇ 11ರಂದು ಬೆಳಿಗ್ಗೆ 11ಕ್ಕೆ ಆಲಮಟಿಯಲ್ಲಿ ನಡೆಯಲಿದೆ.

ಸಮಿತಿಯ ಅಧ್ಯಕ್ಷ, ಸಚಿವ ಎಸ್.ಆರ್. ಪಾಟೀಲ ಬೆಳಿಗ್ಗೆ 11ಕ್ಕೆ ಆಲಮಟ್ಟಿಗೆ ಆಗಮಿಸಿ ಸಭೆಯಲ್ಲಿ ಪಾಲ್ಗೊಂಡು, ಮಧ್ಯಾಹ್ನ 1ಕ್ಕೆ ಅಲ್ಲಿಂದ ಬಾಗಲಕೋಟೆಗೆ ತೆರಳಲಿದ್ದಾರೆ.

ಶಾಸಕರಾದ ಶಿವಾನಂದ ಪಾಟೀಲ, ಸಿ.ಎಸ್. ನಾಡಗೌಡ, ಅಜಯ್ ಸಿಂಗ್, ಎ.ಬಿ. ಮಲಕರೆಡ್ಡಿ, ವಿಜಯಾನಂದ ಕಾಶಪ್ಪನವರ, ಎಚ್.ವೈ. ಮೇಟಿ, ವೆಂಕಟೇಶ ನಾಯಕ ಅವರು ಸಮಿತಿಯ ಸದಸ್ಯರು ಹಾಗೂ ಅಚ್ಚುಕಟ್ಟು ಪ್ರದೇಶದ ಎಲ್ಲ ಶಾಸಕರು ವಿಶೇಷ ಆಹ್ವಾನಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.