ಗುವಾಹಟಿ: ಚಿನ್ನ ಗೆದ್ದು ಇತಿಹಾಸ ನಿರ್ಮಿಸುವ ಆತಿಥೇಯ ಭಾರತದ ಯುವ ಆಟಗಾರ್ತಿ ತನ್ವಿ ಶರ್ಮಾ ಅವರೆ ಆಸೆ ಈಡೇರಲಿಲ್ಲ. ಥಾಯ್ಲೆಂಡ್ನ ಅನ್ಯಪತ್ ಫಿಚಿಟ್ಪ್ರೀಚಸಕ್ ಅವರು ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಭಾನುವಾರ ನೇರ ಆಟಗಳಿಂದ ಅಗ್ರ ಶ್ರೇಯಾಂಕದ ಭಾರತದ ಆಟಗಾರ್ತಿಯನ್ನು ಅವರನ್ನು ಮಣಿಸಿ ಚಾಂಪಿಯನ್ ಆದರು.

ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ್ತಿ ಸೈನಾ ನೆಹ್ವಾಲ್ ಮತ್ತು ಅಪರ್ಣಾ ಪೊಪಟ್ ಬಳಿಕ ಈ ಟೂರ್ನಿಯ ಫೈನಲ್ ತಲುಪಿದ ಭಾರತದ ಮೂರನೇ ಆಟಗಾರ್ತಿಎನಿಸಿರುವ 16 ವರ್ಷ ವಯಸ್ಸಿನ ತನ್ವಿ 7–15, 12–15 ರಲ್ಲಿ ಎರಡನೇ ಶ್ರೇಯಾಂಕದ ಆಟಗಾರ್ತಿಗೆ ಸೋತರು.

ಇದು 17 ವರ್ಷಗಳಲ್ಲಿ ಭಾರತದ ಆಟಗಾರ್ತಿಯೊಬ್ಬರು ವಿಶ್ವ ಜೂನಿಒಯರ್ ಚಾಂಪಿಯನ್ಷಿಪ್ನಲ್ಲಿ ಗೆಲ್ಲುತ್ತಿರುವ ಮೊದಲ ಬೆಳ್ಳಿ ಪದಕವಾಗಿದೆ. ಸೈನಾ (2008ರಲ್ಲಿ ಚಿನ್ನ, 2006ಲ್ಲಿ ಬೆಳ್ಳಿ), ಅಪರ್ಣಾ (1996ರಲ್ಲಿ ಬೆಳ್ಳಿ) ಈ ಹಿಂದೆ ಪದಕ ಗೆದ್ದ ಭಾರತದ ಇನ್ನಿಬ್ಬರು ಆಟಗಾರ್ತಿಯರಾಗಿದ್ದಾರೆ.

ಮೊದಲ ಗೇಮ್ನ ಆರಂಭದಲ್ಲಿ ಸ್ಕೋರ್ 2–2, 4–4 ಸಮಬಲದಲ್ಲಿ ಸಾಗಿತು. ಆದರೆ ಥಾಯ್ ಆಟಗಾರ್ತಿಯ ಕೆಲವು ರಿಟರ್ನ್ಗಳು ತನ್ವಿ ಅವರನ್ನು ವಂಚಿಸಿದವು. ತಮ್ಮ ಎರಡು ಸ್ಮ್ಯಾಶ್ಗಳು ಮತ್ತು ತನ್ವಿ ಅವರು ಅಂಕಣದಾಚೆ ಕಳಿಸಿದ ಹೊಡೆತದಿಂದ ಥಾಯ್ಲೆಂಡ್ ಆಟಗಾರ್ತಿ 13–7 ಮುನ್ನಡೆ ಗಳಿಸಿದ ಮೇಲೆ ಗೇಮ್ ಕೂಡ ಸುಲಭವಾಗಿ ಗೆದ್ದರು.

ಎರಡನೇ ಗೇಮ್ನಲ್ಲಿ ಕೆಲವು ನಿಖರ ಡೀಪ್ ರಿಟರ್ನ್ಗಳ ಮೂಲಕ ಭಾರತದ ಆಟಗಾರ್ತಿ 6–1 ಮುನ್ನಡೆ ಸಾಧಿಸಿದರು. ಆದರೆ ನೆಟ್ ಬಳಿಯ ಹೊಡೆತದಲ್ಲಿ ಎಸಗಿದ ತಪ್ಪುಗಳಿಂದ ಥಾಯ್ ಆಟಗಾರ್ತಿ ಚೇತರಿಸಿ ಹಿನ್ನಡೆಯನ್ನು 5–7ಕ್ಕೆ ಇಳಿಸಿದರು. ನಂತರ ಸ್ಕೋರ್ 8–8 ಸಮನಾಯಿತು. ಕೆಲವು ಬಿರುಸಿನ ಹೊಡೆತಗಳಿಂದ ಅವರು 11–8 ಮುನ್ನಡೆಯನ್ನೂ ಗಳಿಸಿದರು. ನಂತರ ಅವರ ಮೇಲುಗೈ ಮುಂದುವರಿಯಿತು. ಗೆಲುವಿಗೆ ಅನ್ಯಪತ್ ಫಿಚಿಟ್ಪ್ರೀಚಸಕ್ ತೆಗೆದುಕೊಂಡಿದ್ದು 28 ನಿಮಿಷಗಳನ್ನು.

ಲಿಯು ಯಾಂಗ್ಗೆ ಪ್ರಶಸ್ತಿ:

ಇದೇ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಚೀನಾದ ಲಿಯು ಯಾಂಗ್ ಮಿಂಗ್ ಯು ಅವರು 15–10, 15–11 ರಿಂದ ಇಂಡೊನೇಷ್ಯಾದ ಮೊಹಮ್ಮದ್ ಝಕಿ ಉಬೈದಿಲ್ಲಾ ಅವರನ್ನು ಸೋಲಿಸಿದರು. ಮೂರನೇ ಶ್ರೇಯಾಂಕದ ಆಟಗಾರ, ಅಗ್ರ ಶ್ರೇಯಾಂಕದ ಉಬೈದಿಲ್ಲಾ ಅವರನ್ನು ಮಣಿಸಲು 35 ನಿಮಿಷ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.