ನಟ, ದಿವಂಗತ ಪುನೀತ್ ರಾಜಕುಮಾರ್ ಅವರು ನಿಧನರಾಗಿ ಅಕ್ಟೋಬರ್ 29ಕ್ಕೆ ನಾಲ್ಕು ವರ್ಷ ಪೂರ್ಣಗೊಳ್ಳಲಿದೆ. ಆದರೆ ಅಪ್ಪು ಅವರ ನೆನಪು ಮಾತ್ರ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಜೀವಂತವಾಗಿದೆ. ಅಕ್ಟೋಬರ್ 16ರಂದು ಪುನೀತ್ ಅಭಿಮಾನಿಗಳಿಗೆ ಅಶ್ವಿನಿ ಅವರು ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯ ದಿನದಂದು ಪಿಆರ್ಕೆ ಆ್ಯಪ್ ಅನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದರು.
.ಅಪ್ಪು ಅಭಿಮಾನಿಗಳಿಗೆ ಸಿಹಿಸುದ್ದಿ: ಪಿಆರ್ಕೆ ಆ್ಯಪ್ ಟ್ರೇಲರ್ಗೆ ಮುಹೂರ್ತ ನಿಗದಿ.Puneeth Rajkumar Birthday: ಇಂದು ‘ಅಪ್ಪು’ ರಿರಿಲೀಸ್ .
ಈ ಬಗ್ಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ‘ಪ್ರೀತಿಯಿಂದ ಅಪ್ಪು ಅಭಿಮಾನಿಗಳಿಗಾಗಿ. ನಿಮ್ಮ ಕುತೂಹಲಕ್ಕೆ ತೆರೆ ಎಳೆಯುವ ಸಮಯ ಬಂದಿದೆ. ಬರ್ತಿದೆ ಒಂದು ಪವರ್ಫುಲ್ ಟ್ರೇಲರ್ ಇದೇ ಶನಿವಾರ ಬೆಳಗ್ಗೆ 11.55ಕ್ಕೆ ಮತ್ತೆ ಅಪ್ಪುವನ್ನು ಪಿಆರ್ಕೆ ಆ್ಯಪ್ (PRK App) ಮೂಲಕ ಕಣ್ತುಂಬಿಕೊಳ್ಳಲು ರೆಡಿಯಾಗಿ’ ಎಂದು ಬರೆದುಕೊಂಡು ವಿಡಿಯೊ ಒಂದನ್ನು ಹಂಚಿಕೊಂಡಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹಂಚಿಕೊಂಡಿರುವ ವಿಡಿಯೊಗೆ ನಟ ಸುದೀಪ್ ಧ್ವನಿ ನೀಡಿದ್ದಾರೆ. ವಿಡಿಯೊ ಹಂಚಿಕೊಂಡ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಪೋಸ್ಟ್ ಜೊತೆಗೆ ‘ಪ್ರತಿ ಅಭಿಮಾನಿಯ ಹೃದಯದಿಂದ - ಪ್ರತಿಯೊಂದು ಮನೆಯವರೆಗೂ ಅಪ್ಪುವಿನ ನೆನಪು ಅಜರಾಮರ. ಪ್ರೀತಿಸುವ ಹೃದಯಗಳಿಂದ ನಿರ್ಮಾಣವಾದ ವಿಶ್ವದ ಮೊಟ್ಟಮೊದಲ ಫ್ಯಾನ್ಡಮ್ ಆ್ಯಪ್. ಇದೇ ಅಕ್ಟೋಬರ್ 25ರಂದು ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. ನಿಜವಾದ ಪ್ರೀತಿ ಎಂದಿಗೂ ಮಾಸುವುದಿಲ್ಲ ಎಂದು ನಂಬುವ ಪ್ರತಿಯೊಬ್ಬ ಅಭಿಮಾನಿಗೆ ಸಮರ್ಪಿತ. ಈ ಭಾವನಾತ್ಮಕ ಪ್ರಯಾಣಕ್ಕೆ ತಮ್ಮ ಶಕ್ತಿಯುತ ಧ್ವನಿಯನ್ನು ನೀಡಿದ್ದಕ್ಕಾಗಿ ಕಿಚ್ಚ ಸುದೀಪ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. **

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.