ಮೀರ್ಪುರ್ (ಬಾಂಗ್ಲಾದೇಶ): ಲೆಗ್ ಸ್ಪಿನ್ನರ್ ರಶೀದ್ ಹುಸೇನ್ (35ಕ್ಕೆ 6) ಅವರ ಕೈಚಳಕದ ನೆರವಿನಿಂದ ಬಾಂಗ್ಲಾದೇಶ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮುಖಾಮುಖಿಯಲ್ಲಿ 74 ರನ್ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಸುಲಭವಾಗಿ ಮಣಿಸಿತು.

ಹುಸೇನ್ ಅವರ ವೃತ್ತಿಜೀವನದ ಶ್ರೇಷ್ಠ ಬೌಲಿಂಗ್ ಇದಾಗಿದೆ. ಅಲ್ಲದೆ, ಬಾಂಗ್ಲಾದೇಶದ ಬೌಲರ್ರೊಬ್ಬರ ಎರಡನೇ ಅತ್ಯುತ್ತಮ ಸಾಧನೆಯಾಗಿದೆ. 2006ರಲ್ಲಿ ಕೆನ್ಯಾ ವಿರುದ್ಧ ಮಷ್ರಫೆ ಮೊರ್ತಾಜಾ ಅವರು 26 ರನ್ಗೆ 6 ವಿಕೆಟ್ ಪಡೆದಿರುವುದು ಬಾಂಗ್ಲಾ ಪರ ದಾಖಲೆಯಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡವು 49.4 ಓವರ್ಗಳಲ್ಲಿ 207 ರನ್ ಗಳಿಸಿತು. ಹುಸೇನ್ 26 ರನ್ ಗಳಿಸಿ ಬ್ಯಾಟಿಂಗ್ನಲ್ಲೂ ಮಿಂಚಿದ್ದರು. ತೌಹಿದ್ ಹೃದಯ್ (51;90ಎ), ಮಹಿದುಲ್ ಇಸ್ಲಾಂ (46;76ಎ) ಉಪಯುಕ್ತ ಕಾಣಿಕೆ ನೀಡಿದರು.

ಗುರಿ ಬೆನ್ನಟ್ಟಿದ ವಿಂಡೀಸ್ ತಂಡವು ಹುಸೇನ್ ದಾಳಿಗೆ ತತ್ತರಿಸಿ, 39 ಓವರ್ಗಳಲ್ಲಿ 133 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಬ್ರಾಂಡನ್ ಕಿಂಗ್ (44) ಮತ್ತು ಅಲಿಕ್ ಅಥನಾಜೆ (27) ಅವರು ಮೊದಲ ವಿಕೆಟ್ಗೆ 51 ರನ್ ಸೇರಿಸಿ ಉತ್ತಮ ಆರಂಭ ನೀಡಿದ್ದರು. ನಂತರ ಬಂದವರು ಬೇಗನೆ ಪೆವಿಲಿಯನ್ ಸೇರಿಕೊಂಡರು.

ಸಂಕ್ಷಿಪ್ತ ಸ್ಕೋರ್:

ಬಾಂಗ್ಲಾದೇಶ: 49.4 ಓವರ್ಗಳಲ್ಲಿ 207 (ತೌಹಿದ್ ಹೃದಯ್ 51, ಮಹಿದುಲ್ ಇನ್ಲಾಂ 46, ರಶೀದ್ ಹುಸೇನ್ 26; ಜೇಡನ್ ಸೀಲ್ಸ್ 48ಕ್ಕೆ 3, ರೋಸ್ಟನ್ ಚೇಸ್ 30ಕ್ಕೆ 2, ಜಸ್ಟಿನ್ ಗ್ರೀವ್ಸ್ 32ಕ್ಕೆ 2).

ವೆಸ್ಟ್ ಇಂಡೀಸ್: 39 ಓವರ್ಗಳಲ್ಲಿ 133 (ಬ್ರಾಂಡನ್ ಕಿಂಗ್ 44, ಅಲಿಕ್ ಅಧನಾಜೆ 27; ರಶೀದ್ ಹುಸೇನ್ 35ಕ್ಕೆ 6, ಮುಸ್ತಫಿಜುರ್ ರೆಹಮಾನ್ 16ಕ್ಕೆ 2). ಬಾಂಗ್ಲಾದೇಶಕ್ಕೆ 74 ರನ್ಗಳ ಜಯ. ಪಂದ್ಯದ ಆಟಗಾರ: ರಶೀದ್ ಹುಸೇನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.