ನವದೆಹಲಿ: ಒಲಿಂಪಿಯನ್ ಬಲರಾಜ್ ಪನ್ವರ್ ನೇತೃತ್ವದಲ್ಲಿ ವಿಯೆಟ್ನಾಮಿನ ಹಾಯ್ ಫಾಂಗ್ನಲ್ಲಿ ನಡೆದ ಏಷ್ಯನ್ ರೋಯಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತದ ಉತ್ತಮ ಸಾಧನೆ ತೋರಿತು. ಈ ಕೂಟದಲ್ಲಿ ಮೂರು ಚಿನ್ನ, ಐದು ಬೆಳ್ಳಿ, ಎರಡು ಕಂಚು ಸೇರಿ ಒಟ್ಟು 10 ಪದಕಗಳನ್ನು ಗೆದ್ದುಕೊಂಡಿತು.

ಇದು ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡದ ಶ್ರೇಷ್ಠ ಪ್ರದರ್ಶನವೆನಿಸಿತು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದ ಪನ್ವರ್ ಪುರುಷರ ಸಿಂಗಲ್ ಸ್ಕಲ್ (ಎಂ1ಎಕ್ಸ್) ರೇಸ್ನಲ್ಲಿ ಅಧಿಕಾರಯುತ ಪ್ರದರ್ಶನದೊಡನೆ ಚಿನ್ನ ಗೆದ್ದರು.

ಲೈಟ್ವೇಟ್ ಮೆನ್ಸ್ ಡಬಲ್ ಸ್ಕಲ್ನಲ್ಲಿ ಭಾರತ ಮತ್ತೊಂದು ಚಿನ್ನ ಗೆದ್ದುಕೊಂಡಿತು. ಲಕ್ಷಯ್ ಮತ್ತು ಅಜಯ್ ತ್ಯಾಗಿ ಈ ತಂಡದಲ್ಲಿದ್ದರು. ಪುರುಷರ ಕ್ವಾಡ್ರಾಪಲ್ ಸ್ಕಲ್ ಸ್ಪರ್ಧೆಯಲ್ಲೂ ತಂಡದ (ಕುಲ್ವಿಂದರ್ ಸಿಂಗ್, ನವದೀಪ್ ಸಿಂಗ್, ಸತ್ನಾಮ್ ಸಿಂಗ್ ಮತ್ತು ಜೇಕರ್ ಖಾನ್) ಉತ್ತಮ ಸಮನ್ವಯದಿಂದ ಚಿನ್ನ ಒಲಿಯಿತು.

ಇನ್ನೊಂದು ಗಮನಾರ್ಹ ಅಂಶ ಎಂದರೆ ಲೈಟ್ವೇಟ್ ವಿಮೆನ್ಸ್ ಪೇರ್ (ಎಲ್ಡಬ್ಲ್ಯು2–) ಸ್ಪರ್ಧೆಯಲ್ಲಿ ಭಾರತ 15 ವರ್ಷಗಳ ಪದಕ ಬರ ನೀಗಿಸಿ ಬೆಳ್ಳಿ ಗೆದ್ದುಕೊಂಡಿತು. ಗುರ್ಬಾನಿ ಕೌರ್ ಮತ್ತು ದಿಲ್ಜೋತ್ ಕೌರ್ ಅವರ ತಾಂತ್ರಿಕ ನೈಪುಣ್ಯ ಮತ್ತು ಛಲ ಪದಕಕ್ಕೆ ಕಾರಣವಾಯಿತು.

ಭಾರತ ಒಟ್ಟು 15 ಸ್ಪರ್ಧೆಗಳಲ್ಲಿ 37 ಮಂದಿಯ ತಂಡವನ್ನು (25 ಪುರುಷರು, 12 ಮಹಿಳೆಯರು) ಕಣಕ್ಕಿಳಿಸಿತ್ತು.