ಬುಧವಾರ, ಮೇ 18, 2022
28 °C

ಈ ವಾರ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಾವು ನಮ್ಮ ಹೆಂಡತಿಯರು’

ದೊಡ್ಡಬಳ್ಳಾಪುರದ, ವಿ. ಶ್ರಿನಿವಾಸಮೂರ್ತಿ ನಿರ್ಮಿಸುತ್ತಿರುವ ಸೀತಾರಾಮ್ ಕಾರಂತ್ ನಿರ್ದೇಶನದ ಸಂಪೂರ್ಣ ಹಾಸ್ಯಮಯ ಚಿತ್ರ ‘ನಾವು ನಮ್ಮ ಹೆಂಡತಿಯರು’. ಈ ಚಿತ್ರಕ್ಕೆ ಸಂಭಾಷಣೆ  ಶಶಿಧರ್ ಭಟ್, ಛಾಯಾಗ್ರಹಣ ಆರ್ ಮಂಜುನಾಥ, ಸಂಗೀತ ಎಸ್.ಜೆ.ಪ್ರಸನ್ನ, ಸಂಕಲನ ಗೋವರ್ಧನ್,  ಸಾಹಿತ್ಯ ಶಿವನಂಜೇಗೌಡ, ಕಲೆ ಹೊಸ್ಮನೆಮೂರ್ತಿ, ನೃತ್ಯ ಕಪಿಲ್, ಸಹ ನಿರ್ದೇಶನ ಸತೀಶ್, ನಿರ್ವಹಣೆ ಅಚ್ಯುತ ರಾವ್. ತಾರಾಗಣದಲ್ಲಿ ಹರೀಶ್ ರಾಜ್, ಅಶ್ವಿನಿ, ನೇತ್ರಾ ಶೆಟ್ಟಿ, ಪ್ರಕಾಶ್, ಮುನ್ನ, ಅಕ್ಷತಾ ಶೆಟ್ಟಿ, ಮಂಡ್ಯ ರಮೇಶ್, ನಂದಿನ ಪಟವರ್ಧನ್ ಮುಂತಾದವರಿದ್ದಾರೆ.    

‘ಟೇಕ್ ಇಟ್ ಈಜಿ’ ಮಾರ್ಪಾಡು

‘ಟೇಕ್ ಇಟ್ ಈಜಿ’ ಚಿತ್ರವನ್ನು 16 ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಸಿದ್ಧಗೊಳಿಸಲಾಗಿದೆ. ಬಹುತೇಕ ಒಂದೇ ಮನೆಯಲ್ಲಿ ನಡೆಯುವ ಈ ಚಿತ್ರದ ಕೆಲವು ದೃಶ್ಯಗಳನ್ನು ಬೆಂಗಳೂರಿನ ಎಸ್ಟೀಮ್ ಹಾಲ್, ಯಲಹಂಕ, ಬಸವೇಶ್ವರ ನಗರದಲ್ಲಿ ಚಿತ್ರೀಕರಿಸಲಾಗಿದೆ. ಅನಂತ್ ಪದ್ಮನಾಭ ಈ ಚಿತ್ರದ ನಿರ್ದೇಶಕ. ಎನ್.ಎಮ್.ಕೃಪಾಕರ್ ಸಂಗೀತ, ಶಂಕರ್ ಛಾಯಾಗ್ರಹಣ, ಗೋವರ್ಧನ್ ಸಂಕಲನ ಈ ಚಿತ್ರಕ್ಕಿದೆ.ತಾರಾಗಣದಲ್ಲಿ ಅನಂತ್‌ನಾಗ್, ಶಶಿಕುಮಾರ್, ಅಭಿಜಿತ್, ಆದಿ ಲೋಕೇಶ್, ಸಂಜನಾ, ಶ್ರುತಿ, ಚಿತ್ರಾ ಶೆಣೈ ಮುಂತಾದವರು ಇದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.