ಈ ವಾರ ತೆರೆಗೆ

ಮಂಗಳವಾರ, ಮೇ 21, 2019
24 °C

ಈ ವಾರ ತೆರೆಗೆ

Published:
Updated:

`ಲೈಫು ಇಷ್ಟೇನೆ~

ಪವನ್ ಕುಮಾರ್ ನಿರ್ದೇಶನದಲ್ಲಿ ದಿಗಂತ್ ನಾಯಕರಾಗಿ ಅಭಿನಯಿಸಿರುವ ಚಿತ್ರ `ಲೈಫು ಇಷ್ಟೇನೆ~. ಸಂಯುಕ್ತಾ ಹೊರನಾಡು ಹಾಗೂ ಸಿಂಧು ನಾಯಕಿಯರಾಗಿ ಅಭಿನಯಿಸಿದ್ದಾರೆ. ರಮ್ಯಾ ಬಾರ್ನ, ಚೆರ‌್ರಿ, ಸೋನು ಮುಂತಾದವರು ಚಿತ್ರಭೂಮಿಕೆಯಲ್ಲಿದ್ದಾರೆ. ಮನೋಮೂರ್ತಿ ಸಂಗೀತಕ್ಕೆ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿದ್ದಾರೆ. ಜ್ಞಾನಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ.`ಅಲ್ಲಿದೆ ನಮ್ಮನೆ ಇಲ್ಲಿ  ಬಂದೆ ಸುಮ್ಮನೆ~

ಸೌರವ್‌ಬಾಬು ಬಂಡವಾಳ ಹೂಡಿ ನಾಯಕರಾಗಿ ನಟಿಸಿರುವ ಚಿತ್ರ `ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ~. ಗೋಪಿ ಪೀಣ್ಯ ಚಿತ್ರದ ನಿರ್ದೇಶಕರು. ಭಾರತದ ಹಲವೆಡೆ ಮತ್ತು ವಿದೇಶದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪಿ.ಕೆ.ಎಚ್.ದಾಸ್ ಛಾಯಾಗ್ರಹಣ ಚಿತ್ರಕ್ಕಿದೆ.

ಮದನ್-ಹರಿಣಿ ನೃತ್ಯ ನಿರ್ದೇಶನ ಮಾಡಿದ್ದಾರೆ. ತಾರಾಬಳಗದಲ್ಲಿ ಶ್ರೀರಾಜ್, ಯಜ್ಞಾಶೆಟ್ಟಿ, ರೀನಾ ಮೆಹ್ತಾ, ದತ್ತಣ್ಣ, ಪದ್ಮಾಕುಮುಟಾ, ಅಮರನಾಥ್‌ಗೌಡ, ತುಮಕೂರು ದಯಾನಂದ್ ನಟಿಸಿದ್ದಾರೆ.

`ತಂತ್ರ~

ಮೋಹನ್ ಕೃಷ್ಣ ನಿರ್ಮಾಣದ ಚಿತ್ರ `ತಂತ್ರ~ಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಕಂಪ್ಯೂಟರ್ ಲೋಕದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಸೈಬರ್ ಅಪರಾಧವನ್ನು ಕಥಾವಸ್ತುವನ್ನಾಗಿರಿಸಿಕೊಂಡಿರುವ ಈ ಚಿತ್ರದಲ್ಲಿ ಗಿರೀಶ್ ಮಟ್ಟಣ್ಣನವರ್, ನವ್ಯ ನಟರಾಜ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಕಥೆ ಚಿತ್ರಕಥೆ ನಿರ್ದೇಶನ ಬಾಲಾಜಿ ಅವರದ್ದು. ಅಶೋಕ್ ಜಂಬೆ ಸಂಗೀತ ನೀಡಿದ್ದು, ಶಂಕರ್ ಛಾಯಾಗ್ರಹಣ ಮಾಡಿದ್ದಾರೆ. ಸಹನಿರ್ದೇಶಕ ಅಶ್ವಿನ್ ಕುಮಾರ್ ಸಂಭಾಷಣೆಯನ್ನೂ ಬರೆದಿದ್ದಾರೆ. ಪ್ರಮೋದ್ ಚಕ್ರವರ್ತಿ, ಸಂತೋಷ, ಸಿದ್ದರಾಜು, ಆಶಾ, ಬಿರಾದಾರ್, ಪ್ರಣವ ಮೂರ್ತಿ, ಮಿಮಿಕ್ರಿ ರಾಜಗೋಪಾಲ್,  ಕು. ಕಲ್ಯಾಣಕರ್, ತೇಜಸ್ವಿನಿ, ರಶ್ಮಿ ಚಿತ್ರದಲ್ಲಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry