ಮಂಗಳವಾರ, ಜನವರಿ 28, 2020
21 °C

ಈ ವಾರ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಪ್ರಾರ್ಥನೆ~

ಸುಷ್ಮಾ ಮತ್ತು ಎಸ್.ಹರೀಶ್ ನಿರ್ಮಿಸಿರುವ `ಪ್ರಾರ್ಥನೆ~ ಚಿತ್ರವನ್ನು ಪತ್ರಕರ್ತ ಕೆ.ಸದಾಶಿವ ಶೆಣೈ ನಿರ್ದೇಶಿಸಿದ್ದಾರೆ. `ಪ್ರಾರ್ಥನೆ~ ಚಿತ್ರಕ್ಕೆ ಜೆ.ಎಂ.ಪ್ರಹ್ಲಾದ್ ಕಥೆ ಬರೆದಿದ್ದಾರೆ. ಚಿತ್ರಕ್ಕೆ ಸಂಭಾಷಣೆ ಬರೆಯುವಲ್ಲಿ ಪ್ರಹ್ಲಾದ್ ನಿರ್ದೇಶಕರಿಗೆ ಸಾಥ್ ನೀಡಿದ್ದಾರೆ.

 

ರಾಮಚಂದ್ರ ಐತಾಳರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅನಿಲ್‌ನಾಯ್ಡು ಸಂಕಲನ ಹಾಗೂ ದಿನೇಶ್ ಮಂಗಳೂರು ಕಲಾ ನಿರ್ದೇಶನ, ವೀರಸಮರ್ಥ್ ಸಂಗೀತ ನಿರ್ದೇಶನ ಇದೆ. ಅನಂತನಾಗ್, ಪವಿತ್ರಾ ಲೋಕೇಶ್, ಸುಧಾಮೂರ್ತಿ, ಪ್ರಕಾಶ್ ರೈ, ಅಶೋಕ್, ಬಿ.ಸಿ.ಪಾಟೀಲ್, ಮಠ ಗುರುಪ್ರಸಾದ್, ಮಾಸ್ಟರ್ ಸಚಿನ್, ಮಾಸ್ಟರ್ ಮನೋಜ್ ತಾರಾಗಣದಲ್ಲಿದ್ದಾರೆ.`ಶಕ್ತಿ~

ರಾಮು ನಿರ್ಮಿಸಿರುವ `ಶಕ್ತಿ~ಯಲ್ಲಿ ಮಾಲಾಶ್ರೀ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅನಿಲ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ರಾಜೇಶ್ ಛಾಯಾಗ್ರಹಣವಿರುವ ಚಿತ್ರಕ್ಕೆ ಥ್ರಿಲ್ಲರ್ ಮಂಜು, ರವಿವರ್ಮ, ರಾಮ್‌ಲಕ್ಷ್ಮಣ್ ಹಾಗೂ ಪಳನಿರಾಜ್ ಸಾಹಸ ನಿರ್ದೇಶನವಿದೆ.

 

ವರ್ಧನ್ ಸಂಗೀತ ನೀಡಿದ್ದಾರೆ. ಸಂಕಲನ ಲಕ್ಷ್ಮಣ್ ರೆಡ್ಡಿ ಅವರದು. ರವಿಶಂಕರ್, ಶಯಾಜಿರಾವ್ ಶಿಂಧೆ, ವಿನಯಾಪ್ರಸಾದ್, ಅವಿನಾಶ್, ಶರತ್ ಲೋಹಿತಾಶ್ವಾ, ಸಾಧುಕೋಕಿಲಾ, ಕುರಿಗಳು ಪ್ರತಾಪ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)